ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ

| Published : Jun 27 2024, 01:07 AM IST

ಸಾರಾಂಶ

ಕಡೂರುಪಟ್ಟಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಬುಧವಾರ ಬೆಳಿಗ್ಗೆ ಸುಮಾರು11.30ಕ್ಕೆ ಪಟ್ಟಣದ ದೊಡ್ಡಪೇಟೆ, ಹಳೆಪೇಟೆ, ಸುಭಾಷ್ ನಗರ ಮತ್ತಿತರ ಪ್ರದೇಶಗಳಲ್ಲಿ ಶ್ರೀ ವೀರಭದ್ರ ಸ್ವಾಮಿ, ಶ್ರೀ ಕೆಂಚಾಂಬದೇವಿ, ಶ್ರೀ ಸ್ವರ್ಣಾಂಬ ದೇವಿ, ಶ್ರೀ ಬನಶಂಕರಿ, ಶ್ರೀ ಭದ್ರಕಾಳಮ್ಮ ಶ್ರೀ ಬೈರೇ ದೇವರು, ಚೌಡ್ಲಾಪುರದ ಶ್ರೀಕರಿಯಮ್ಮ, ಭದ್ರಕಾಳಮ್ಮ ದೇವರ ಪರಿವಾರದೊಂದಿಗೆ ಸಿಡಿ ಆಡುವ ಮಕ್ಕಳನ್ನು ಕಳಸ ಗಳೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕೆಂಚಮ್ಮ ದೇವಾಲಯದ ಆವರಣಕ್ಕೆ ಕರೆತರಲಾಯಿತು.

ದೇವಾಲಯ ಪಕ್ಕದಲ್ಲಿರುವ ಸಿಡಿ ಕಂಬಕ್ಕೆ ಸಾಂಪ್ರ ದಾಯಿಕ ಪೂಜೆ ಸಲ್ಲಿಸಿ ಸಿಡಿ ಕಂಬದ ಮೇಲೆ ಸಿಡಿ ಆಡಿಸುವವರನ್ನು ಕೂರಿಸಲಾಯಿತು. ಅದಕ್ಕೂ ಮುನ್ನ ದೇವರುಗಳು ಸಿಡಿ ಕಂಬ ಪ್ರದಕ್ಷಿಣೆ ಮಾಡುವಾಗ ಭಕ್ತರು ಅರಿಶಿನ ಕುಂಕುಮ ಎರಚಿದರು. ಆನಂತರ ಜನಮಿತ್ರ ನಾರಾಯಣ ಕುಟುಂಬದ ಪೂಜಾರಿ ಧರಣಿಪಾಲ್ ಮಕ್ಕಳಿಗೆ ಸರಪಳಿ ಕೊಂಡಿ ಹಾಕಿ ಶ್ರೀ ಕೆಂಚಾಂಬ ದೇವಿಯವರೊಂದಿಗೆ ಪ್ರದಕ್ಷಿಣೆ ಹಾಕಿದ ಬಳಿಕ ಸಿಡಿಗೆ ಚಾಲನೆ ದೊರಕಿತು.

ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸಿಡಿ ಆಡಿಸಲಾಯಿತು. ಸಮಯ ಅವಧಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮೂರು ಮಕ್ಕಳನ್ನು ಒಟ್ಟಿಗೆ ಸಿಡಿ ಆಡಿಸಲಾಯಿತು ನೂರಾರು ಭಕ್ತರು ಸಿಡಿ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ತೋಟದ ಮನೆ ಮೋಹನ್, ಈರಳ್ಳಿ ರಮೇಶ್, ಕೆ.ಜಿ. ಶ್ರೀನಿವಾಸಮೂರ್ತಿ, ರಂಗನಾಥ್, ನಲ್ಲೂರಿ ಸುರೇಶ್, ವಿನಯ್, ಕುಮಾರ್, ದೇವಾಲಯ ಸಮಿತಿ ಪದಾಧಿಕಾರಿಗಳು ಇದ್ದರು.

26ಕೆಕೆಡಿಯು1.

ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ದೇವಾಲಯದ ಆವರಣದಲ್ಲಿ ಶ್ರೀ ಕೆಂಚಾಂಬ ದೇವಿ ಸಿಡಿ ಸೇವೆ ಮಹೋತ್ಸವ ನಡೆಯಿತು.