ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪರಿವಾರ ದೈವಗಳ ಸಾನಿಧ್ಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

| Published : Mar 01 2025, 01:00 AM IST

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪರಿವಾರ ದೈವಗಳ ಸಾನಿಧ್ಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 500 ವರ್ಷ ಇತಿಹಾಸ ಹೊಂದಿರುವ ಕವತ್ತಾರಿನ ಸಿರಿ ಅಬ್ಬಗ ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆದಿ ಅಲಡೆ ಪರಿವಾರ ದೈವಗಳಾದ ಭೂತರಾಜ ಮೈಸಂದಾಯ ಜುಮಾದಿ, ಜಾರಂದಾಯ, ಪಂಜುರ್ಲಿ, ರಕ್ತೇಶ್ವರಿ ಮತ್ತಿತರ ದೈವೀ ಸಾನಿಧ್ಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡಿನಲ್ಲಿ ಪ್ರಮುಖ ಆಲಡೆ ಕ್ಷೇತ್ರವಾಗಿರುವ ಸುಮಾರು 500 ವರ್ಷ ಇತಿಹಾಸ ಹೊಂದಿರುವ ಕವತ್ತಾರಿನ ಸಿರಿ ಅಬ್ಬಗ ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆದಿ ಅಲಡೆ ಪರಿವಾರ ದೈವಗಳಾದ ಭೂತರಾಜ ಮೈಸಂದಾಯ ಜುಮಾದಿ, ಜಾರಂದಾಯ, ಪಂಜುರ್ಲಿ, ರಕ್ತೇಶ್ವರಿ ಮತ್ತಿತರ ದೈವೀ ಸಾನಿಧ್ಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಶಿಲಾನ್ಯಾಸವನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕರಾದ ವಿಷ್ಣುರಾಜ ಭಟ್, ವಿಶ್ವೇಶ್ವರ ಭಟ್, ಸುಬ್ರಮಣ್ಯ ಭಟ್ ದೇಂದಡ್ಕ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ ಡಾ. ನಿತ್ಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ, ಪುತ್ತೂರ ಬಾವ ಮೋಹನ್ ಶೆಟ್ಟಿ, ಗರುಡಾಡಿ ಪಿ. ಚಾಮುಂಡೇಶ್ವರಿ ಕ್ಷೇತ್ರದ ವಿಠಲ ಪೂಜಾರಿ, ಕೋಶಾಧಿಕಾರಿ ದೇವಿ ಪ್ರಸಾದ ಅಜಿಲ, ಪದ್ಮನಾಭ ಪಂಬದ, ಶರತ್ ಅಜಿಲ, ಶೋಧನ್ ಅಜಿಲ, ದೆಪುಣಿಗುತ್ತು ಸುಧಾಕರ ಶೆಟ್ಟಿ, ದೇವಿಕಾ ಶೆಟ್ಟಿ, ಜಯ ಪೂಜಾರಿ ಸಾನದ ಮನ್, ಸದಾನಂದ ಶೆಟ್ಟಿ ಕವತ್ತಾರು, ಸ್ವರಾಜ್ ಶೆಟ್ಟಿ ಮುಂಡ್ಕೂರು, ಸಾಯಿನಾಥ ಶೆಟ್ಟಿ ಮುಂಡ್ಕೂರು, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

ಮಾ.8ರಂದು ‘ಮೂಡೂರು-ಪಡೂರು’ ಜೋಡುಕರೆ ಕಂಬಳ

ನಾವೂರು ಗ್ರಾಮದ ಕೂಡಿಬೈಲಿನಲ್ಲಿ 14ನೇ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳ ಮಾರ್ಚ್ 8ರಂದು ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಶನಿವಾರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ದಿ.ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಗ್ಗೆ 8.45ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಸಹಿತ ಅಲ್ಲಿಪಾದೆ ಸೇಂಟ್ ಆಂಟನಿ ಚರ್ಚ್‌ ಧರ್ಮಗುರು ರಾಬರ್ಟ್ ಡಿಸೋಜ, ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಕಂಬಳ ಉದ್ಘಾಟಿಸುವರು ಎಂದರು.