ಬಿಹಾರದಲ್ಲಿ ಜನಿಸಿದ ಮಹಾವೀರರು ಪಂಚ ತತ್ವದಡಿಯಲ್ಲಿ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ ಮಹನೀಯರು. ಅವರ ಸಂದೇಶದಂತೆ ಇಂದು ಮತ್ತೆ ಸತ್ಯ ಮತ್ತು ಅಹಿಂಸೆಯ ಪಾಲನೆ ಮೂಲಕ ಸಾಮರಸ್ಯದ ಸಮಾಜ ವನ್ನು ಕಟ್ಟುವಂತಗಾಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ಉಡುಪಿ: ಬಿಹಾರದಲ್ಲಿ ಜನಿಸಿದ ಮಹಾವೀರರು ಪಂಚ ತತ್ವದಡಿಯಲ್ಲಿ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ ಮಹನೀಯರು. ಅವರ ಸಂದೇಶದಂತೆ ಇಂದು ಮತ್ತೆ ಸತ್ಯ ಮತ್ತು ಅಹಿಂಸೆಯ ಪಾಲನೆ ಮೂಲಕ ಸಾಮರಸ್ಯದ ಸಮಾಜ ವನ್ನು ಕಟ್ಟುವಂತಗಾಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್‍ಯಕ್ರಮದಲ್ಲಿ ಶ್ವೇತಾ ಜೈನ್ ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಶ್ಮಿ ಸಾಗರ್ ಜಿನ ಸ್ಮೃತಿಯನ್ನು ಪ್ರಸ್ತುತಪಡಿಸಿದರು. ಈ ಸಂಧರ್ಭ ಜೈನ ಸಮುದಾಯದ ಸಾಧಕ ಯೋಗರಾಜ್ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜೈನ್ ಮಿಲನ್ ಅಧ್ಯಕ್ಷ ಡಾ. ನಿತಿನ್ ಪಾಟೀಲ್, ಭಾರತೀಯ ಜೈನ್ ಮಿಲನ್ ಕಾರ್‍ಯದರ್ಶಿ ಪ್ರಸನ್ನ, ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿದರು. ರಾಮಾಂಜಿ ನಿರೂಪಿಸಿ, ನಿತಿನ್ ವಂದಿಸಿದರು.