ಸಾರಾಂಶ
ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಡಿ.22ರಂದು ಆರಂಭಗೊಂಡು ಡಿ.27ರ ತನಕ ನಡೆದು ಶುಕ್ರವಾರ ಚನ್ನಗಿರಿಯಲ್ಲಿ ಸಂಪನ್ನಗೊಂಡಿತು.
ಚನ್ನಗಿರಿ: ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಡಿ.22ರಂದು ಆರಂಭಗೊಂಡು ಡಿ.27ರ ತನಕ ನಡೆದು ಶುಕ್ರವಾರ ಸಂಪನ್ನಗೊಂಡಿತು.
ಶುಕ್ರವಾರ ರಾತ್ರಿ ಪಟ್ಟಣದ ಹೊರವಲಯದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಗದ್ದಿಗೆ ಮಠದಿಂದ ಶ್ರೀ ಮಹೇಶ್ವರ ಸ್ವಾಮಿ, ಶ್ರೀ ಜಯದೇವ ಮಹಾಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣ ಪ್ರವೇಶಿಸುವ ಮೂಲಕ ಜಾತ್ರೆ ಮುಕ್ತಾಯ ಕಂಡಿತು.ಡಿ.24ರಂದು ಬೆಳಗ್ಗೆ ಶ್ರೀ ಮಠದಿಂದ ಶ್ರೀ ಮಹೇಶ್ವರ ಸ್ವಾಮಿ ಮತ್ತು ಲಿಂಗೈಕ್ಯ ಶ್ರೀ ಜಯದೇವ ಸ್ವಾಮಿಯವರ ಪಂಚಲೋಹದ ಮೂರ್ತಿಯನ್ನು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿಟ್ಟು ಶ್ರೀ ಶಿವಲಿಂಗೇಶ್ವರ ಸ್ವಾಮಿ ಗದ್ದಿಗೆ ಮಠಕ್ಕೆ ತೆರಳಲಾಗಿತ್ತು. ಅಲ್ಲಿ ದೇವರಿಗೆ ಮತ್ತು ಗದ್ದಿಗೆಗೆ ತ್ರಿಕಾಲ ಪೂಜೆ ಮಾಡುತ್ತಾ ಬಂದ ಭಕ್ತರಿಗೆ 4 ದಿನಗಳ ಕಾಲವೂ ಅನ್ನ, ಹಾಲು, ಬೆಲ್ಲ, ಬಾಳೆಹಣ್ಣಿನ ಕಿಚಡಿ ಪ್ರಸಾದ ವಿತರಿಸಲಾಯಿತು. ರಾತ್ರಿ ಶ್ರೀ ಮಠದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ವೀರಶೈವ ಸಮಾಜದ ಪ್ರಮುಖರಾದ ಸಾಗರದ ಶಿವಲಿಂಗಪ್ಪ, ರಾಜಶೇಖರಯ್ಯ, ಎಂ.ಚಂದ್ರಯ್ಯ, ನಾಗೇಂದ್ರಯ್ಯ, ಸಂಗಯ್ಯ, ಎಲ್.ಎಂ.ರೇಣುಕಾ, ಜವಳಿ ಮಹೇಶ್, ರೂಪಮುರುಡೇಶ್, ಕಮಲಮ್ಮ, ಸವಿತಾ, ವೈಶಾಖ, ವೀರೇಶ್, ರುದ್ರಯ್ಯ, ಲಿಂಗಮೂರ್ತಿ, ಬೂದಿಸ್ವಾಮಿ, ಸಮಾಜ ಬಾಂಧವರು ಹಾಜರಿದ್ದರು.- - - -28ಕೆಸಿಎನ್ಜಿ3.ಜೆಪಿಜಿ: