ಸಾರಾಂಶ
ಕಲಾದಗಿ: ಶ್ರೀರಾಮನವಮಿಯ ಹಾಗು ಶ್ರೀ ಸಾಯಿಬಾಬಾ ಜನ್ಮದಿನ ಅಂಗವಾಗಿ ಇಲ್ಲಿನ ಶ್ರೀ ಸಾಯಿಮಂದಿರದಲ್ಲಿ ಶ್ರೀಸಾಯಿಬಾಬಾ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶ್ರೀ ಸಾಯಿಬಾಬಾ ಸೇವಾ ಸಮಿತಿ ಹಾಗು ಸ್ಥಳೀಯ ನೂರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಸಡಗರದಿಂದ ನೆರವೇರಿಸಿದರು.
ಕಲಾದಗಿ: ಶ್ರೀರಾಮನವಮಿಯ ಹಾಗು ಶ್ರೀ ಸಾಯಿಬಾಬಾ ಜನ್ಮದಿನ ಅಂಗವಾಗಿ ಇಲ್ಲಿನ ಶ್ರೀ ಸಾಯಿಮಂದಿರದಲ್ಲಿ ಶ್ರೀಸಾಯಿಬಾಬಾ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶ್ರೀ ಸಾಯಿಬಾಬಾ ಸೇವಾ ಸಮಿತಿ ಹಾಗು ಸ್ಥಳೀಯ ನೂರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಸಡಗರದಿಂದ ನೆರವೇರಿಸಿದರು. ದೇವಸ್ಥಾನ ಪೂಜಾ ಅರ್ಚಕರು ಮುಂಜಾನೆ ಸಾಯಿಬಾಬಾ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಸಾಯಿ ಮಂತ್ರ ಮಂಗಳಾರತಿ ಜರುಗಿದವು. ಇದೇ ವೇಳೆ ಗ್ರಾಮದ ಮಹಿಳಾ ಭಜನೆ ಮಂಡಳಿಯವರು ನೀಡಿದ ಭಜನಾ ಕಾರ್ಯಕ್ರಮ, ಶ್ರೀಸಾಯಿನಾಮ ಭಜನೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ನೂರಾರು ಸುಮಂಗಲೆಯರು ಶ್ರೀ ಸಾಯಿಬಾಬಾರ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಸಂಜೆ ಧೂಪಾರತಿ ಮುಂತಾದ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ನಡೆದವು. ಗ್ರಾಮ ಒಳಗೊಂಡಂತೆ ಸುತ್ತಲಿನ ಅನೇಕ ಊರುಗಳ ಭಕ್ತರು, ಮುಧೋಳ, ಬಾಗಲಕೋಟೆಯಿಂದ ಆಗಮಿಸಿದ್ದ ಭಕ್ತಸಮೂಹ ತೊಟ್ಟಿಲೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರು ಸಾಯಿಪ್ರಸಾದ ಸ್ವೀಕರಿಸಿದರು.