ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: 19 ವರ್ಷ ವಯೋಮಾನದ ಕರ್ನಾಟಕ ರಾಜ್ಯ ಕ್ರಿಕೆಟ್ ಮಹಿಳಾ ಟಿ-20 ಹಾಗೂ ಏಕದಿನ ಸರಣಿಗೆ ನಗರದ ಶ್ರೇಯಾ ಚವ್ಹಾಣ ಆಯ್ಕೆಯಾಗಿದ್ದಾಳೆ. ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಾ ಚವ್ಹಾಣ ಅಕ್ಟೋಬರ್ 1ರಿಂದ ಚೆನೈಯಲ್ಲಿ ನಡೆಯಲಿರುವ ರಾಜ್ಯ ಮಹಿಳಾ ಅಂಡರ್-19 ತಂಡದಲ್ಲಿ ಆಡಲಿದ್ದಾರೆ. ಈ ತಂಡವು ಗುಜರಾತ, ಬರೋಡಾ, ಛತ್ತಿಸಗಡ, ಮಿಜೋರಾಂ ಹಾಗೂ ಮಹಾರಾಷ್ಟ್ರ ತಂಡಗಳ ಜೊತೆಗೆ ಏಕದಿನ ಶ್ರೇಣಿ ಪಂದ್ಯಗಳನ್ನು ಆಡಲಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ: 19 ವರ್ಷ ವಯೋಮಾನದ ಕರ್ನಾಟಕ ರಾಜ್ಯ ಕ್ರಿಕೆಟ್ ಮಹಿಳಾ ಟಿ-20 ಹಾಗೂ ಏಕದಿನ ಸರಣಿಗೆ ನಗರದ ಶ್ರೇಯಾ ಚವ್ಹಾಣ ಆಯ್ಕೆಯಾಗಿದ್ದಾಳೆ. ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಾ ಚವ್ಹಾಣ ಅಕ್ಟೋಬರ್ 1ರಿಂದ ಚೆನೈಯಲ್ಲಿ ನಡೆಯಲಿರುವ ರಾಜ್ಯ ಮಹಿಳಾ ಅಂಡರ್-19 ತಂಡದಲ್ಲಿ ಆಡಲಿದ್ದಾರೆ. ಈ ತಂಡವು ಗುಜರಾತ, ಬರೋಡಾ, ಛತ್ತಿಸಗಡ, ಮಿಜೋರಾಂ ಹಾಗೂ ಮಹಾರಾಷ್ಟ್ರ ತಂಡಗಳ ಜೊತೆಗೆ ಏಕದಿನ ಶ್ರೇಣಿ ಪಂದ್ಯಗಳನ್ನು ಆಡಲಿದೆ. ಬಳಿಕ 2025 ಜನೇವರಿಯಲ್ಲಿ ಅಸ್ಲಾಂ, ಮಿಜೋರಾಂ ಮತ್ತು ಛತ್ತಿಸಗಡ ರಾಜ್ಯ ತಂಡಗಳೊಂದಿಗೆ ಸೆಣಸಲಿದ್ದಾರೆ.
ಶ್ರೇಯಾಳ ಸಾಧನೆಗೆ ಎಸ್.ಎಲ್.ಪಾಟೀಲ, ಎಲ್.ಬಿ.ಪಾಟೀಲ, ಸಂತೋಷ ರೆಡ್ಡಿ ಪಾಟೀಲ, ಎಲ್.ಎಸ್.ಜಾಲವಾದಿ, ಎಂ.ಟಿ.ಶೋಭಾನಿ ಹರ್ಷ ವ್ಯಕ್ತಪಡಿಸಿದ್ದಾರೆ.