ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಖಿಲ್ಲೆ ಮೊಹಲ್ಲಾದಲ್ಲಿರುವ ಶ್ರೀ ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ವತಿಯಿಂದ ಸೆ. 26ರ ಬೆಳಗ್ಗೆ 10.30ಕ್ಕೆ ದಸರಾ ಕವಿಗೋಷ್ಠಿ ಹಾಗೂ ತೇಜಸ್ವಿ ಸಾಹಿತ್ಯ ಚಿಂತನೆ ನಡೆಯಲಿದೆ.ಕವಿಗೋಷ್ಠಿಯ ಜೊತೆಗೆ ತೇಜಸ್ವಿ ಸಾಹಿತ್ಯ ಚಿಂತನೆಯನ್ನು ಕುರಿತು ವಿದ್ಯಾರ್ಥಿನಿಯರು ಪ್ರಬಂಧ ಮಂಡಿಸುವರು.ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಪ್ರೊ. ರಾಗೌ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಕವಯತ್ರಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಸಂಶೋಧನಾ ಪೀಠದ ನಿರ್ದೇಶಕ ಪ್ರೊ. ಕವಿತಾ ರೈ ಆಗಮಿಸುವರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಶಾರದ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಪ್ರಸಾದಮೂರ್ತಿ ಭಾಗವಹಿಸುವರು.ಕವಿಗೋಷ್ಠಿಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಲಿದ್ದು, ಕಾಲೇಜಿನ ಕನ್ನಡ ವಿಭಾಗವು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಚಿಂತನ-ಮಂಥನ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಕೂಡ ತೇಜಸ್ವಿ ಬದುಕು-ಬರಹ, ಅಣ್ಣನ ನೆನಪು-ಅವಲೋಕನ, ತೇಜಸ್ವಿ ಕಥೆಗಳಲ್ಲಿ ಪ್ರಕೃತಿ, ಜುಗಾರಿ ಕ್ರಾಸ್-ಕಾದಂಬರಿ, ಕೃಷ್ಣಗೌಡನ ಆನೆ-ಪಕ್ಷಿನೋಟ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಐದು ಮೌಲಿಕ ಪ್ರಬಂಧಗಳನ್ನು ವಿದ್ಯಾರ್ಥಿನಿಯರು ಮಂಡಿಸಲಿದ್ದಾರೆ.