ವಿಟ್ಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

| Published : Aug 28 2024, 12:56 AM IST

ಸಾರಾಂಶ

ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಆಚರಣಾ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ವಿಟ್ಲದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಆಚರಣಾ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ವಿಟ್ಲದಲ್ಲಿ ನಡೆಯಿತು.

ವೇದ ಮೂರ್ತಿ ಉದಯೇಶ ಕೆದಿಲಾಯ ಪೌರೋಹಿತ್ಯ ದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಕುಂಟಾರು ಶ್ರೀ ರವೀಶ ತಂತ್ರಿಗಳ ಉಪಸ್ಥಿತಿಯಲ್ಲಿ ವಿದ್ಯಾ ಗೋಪಾಲ ಹವನ ನಡೆಯಿತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಟ ಶ್ರೀ ಕೃಷ್ಣ ವೇಷಧಾರಿ ಮಕ್ಕಳ ಹಾಗೂ ಕುಣಿತ ಭಜನೆ ಶೋಭಾಯಾತ್ರೆಯನ್ನು ರಾಜೀವ ಭಂಢಾರಿ ಭಗವದ್ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿದರು.

ವಿಟ್ಲದ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಹಿರಿಯ ಸ್ವಯಂಸೇವಕ ತನಿಯಪ್ಪ ಮೂಲ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಗಳೂರು ವಿಶ್ವ ಹಿಂದೂ ಪರಿಷದ್ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಧಾರ್ಮಿಕ ಪ್ರವಚನ ನೀಡಿದರು.

ಸಭಾಧ್ಯಕ್ಷತೆಯನ್ನು ವಿಟ್ಠಲ ಗ್ರಾಮೀಣ ಬ್ಯಾಂಕ್ ನ ನಿರ್ದೇಶಕ ಮನೋರಂಜನ್ ಕರೇಯಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತ ಚಂದ್ರಶೇಖರ ಕೆ.ಜಿ. ಹಾಗೂ ಉಪನ್ಯಾಸಕಿ ವಸುಧ ಭಾಗವಹಿಸಿದ್ದರು.

ಬಾಲಗೋಕುಲ ಸಮಿತಿ ಗೌರವಾಧ್ಯಕ್ಷ ಶ್ರೀಕಂಠ ವರ್ಮ ವೇದಿಕೆಯಲ್ಲಿ ದ್ದರು. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಂಜಂತಿಮಾರ್ ಸ್ವಾಗತಿಸಿದರು. ಪರಮೇಶ್ವರ ಆಚಾರ್ಯ ಪ್ರಸ್ತಾಪಿಸಿದರು. ವಿನಯ್ ಆಲಂಗಾರು ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು.