ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಶ್ರೀ ಕೃಷ್ಣ ಜಯಂತಿಯ ಹಿನ್ನೆಲೆ ಸಂಸದ ರಾಜಶೇಖರ ಹಿಟ್ನಾಳ ನಗರದ ಸಿರಸಪ್ಪಯ್ಯನ ಮಠದ ಓಣಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನಕ್ಕೆ ತೆರಳಿ ಬಾಲಕೃಷ್ಣನ ತೊಟ್ಟಿಲು, ಶ್ರೀ ಕೃಷ್ಣ ಮೂರ್ತಿಯ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ನಗರಸಭೆ ಸದಸ್ಯ ಅಕ್ಬರಪಾಶಾ ಪಲ್ಟನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಾಣೇಶ್ ಪೂಜಾರ, ಹುಲಗಪ್ಪ ವಾಲಿಕಾರ, ಸಂಗಪ್ಪ ಬಾಗಲಿ, ಭೀಮಣ್ಣ ಲೇಬಗೇರಿ, ವೆಂಕಟೇಶ್ ಕಟ್ಟಿಮನಿ, ರಮೇಶ್ ನಾಗೇಶನಹಳ್ಳಿ, ಕಾಮಾಕ್ಷಿ ವಾಲಿಕಾರ, ಹುಲಿಗಮ್ಮ ವಾಲಿಕಾರ ಸೇರಿದಂತೆ ಹಲವರಿದ್ದರು.
ಜೀವನದಲ್ಲಿ ಕೃಷ್ಣನ ಸಂದೇಶ ಅಳವಡಿಸಿಕೊಳ್ಳಿ- ದೊಡ್ಡನಗೌಡ ಪಾಟೀಲ:ಶ್ರೀ ಕೃಷ್ಣ ನೀಡಿರುವ ಸಂದೇಶಗಳಿಂದ ಮನುಷ್ಯರ ಪ್ರತಿಯೊಂದು ಕಷ್ಟಗಳು ದೂರವಾಗುತ್ತವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಆ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಷ್ಟಗಳು ಕಳೆದು ಹೋಗುತ್ತವೆ.ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶಗಳನ್ನು ನೀಡಿದ್ದು, ಧರ್ಮವನ್ನು ರಕ್ಷಿಸುವ ಕುರಿತು ಕರ್ತವ್ಯ ಪಾಲನೆಯ ಹಲವು ಸಂದೇಶಗಳನ್ನು ಬೋಧಿಸಿದ್ದಾನೆ ಎಂದು ಹೇಳಿದರು.
ದ್ರೌಪದಿಯ ವಸ್ತ್ರಾಭರಣದ ಸಂದರ್ಭದಲ್ಲಿ ಸ್ತ್ರೀ ರಕ್ಷಣೆಗಾಗಿ ಬಂದ ಮಹಾನ್ ಪರಮಾತ್ಮ ಶ್ರೀ ಕೃಷ್ಣನಾಗಿದ್ದಾನೆ ಹಾಗೂ ಆಪತ್ಬಾಂದವನಾಗಿದ್ದಾನೆ. ಶ್ರೀ ಕೃಷ್ಣ ಮನುಕುಲಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭ ತಹಸೀಲ್ದಾರ ಅಶೋಕ ಶಿಗ್ಗಾಂವಿ ಸೇರಿದಂತೆ ಅನೇಕರು ಇದ್ದರು.