ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

| Published : Sep 30 2024, 01:28 AM IST

ಸಾರಾಂಶ

ಹಾರನಹಳ್ಳಿಯಲ್ಲಿ ವಿನಾಯಕ ಚೌತಿಯ ದಿನದಂದು ಪ್ರತಿಷ್ಠಾಪನೆ ಮಾಡಿದ್ದ ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಉತ್ಸವ ವೈಭವದಿಂದ ನಡೆಯಿತು. ಮಹಾ ಗಣಪತಿಗೆ ಪ್ರಿಯವಾದ ಕಡುಬಿನ ಹಾರ ಹಾಕಿದ ಬಣ್ಣ‌ಬಣ್ಣ ಹೂವುಗಳಿಂದ ಶೃಂಗಾರ ಮಾಡಿದ ನಂತರ ಭಕ್ತಾದಿಗಳು ಗಣಪತಿಗೆ ಮಹಾ ಮಂಗಳಾರತಿ ಪೂಜಾ ಕಾರ್ಯಗಳು ನಡೆಯಿತು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಉತ್ಸವ ಉತ್ಸವ ನಡೆಯಿತು.ಉತ್ಸವಕ್ಕೆ ಕರಡೆ ವಾ,ದ್ಯ ತಮಟೆ ವಾದ್ಯಗಳು ಉತ್ಸವಕ್ಕೆ ಮೆರುಗು ನೀಡಿತು. ತಮಟೆ ವಾದ್ಯಕ್ಕೆ ಯುವಕರು ಕುಣಿದು ಕುಪ್ಪಳಿಸಿದರು‌‍.

ಹಾರನಹಳ್ಳಿ: ಇಲ್ಲಿನ ವಿನಾಯಕ ಭಕ್ತ ಮಂಡಳಿ ಕೋಡಮ್ಮ ದೇವಿ ಭಕ್ತ ಮಂಡಳಿ ವತಿಯಿಂದ ಶ್ರೀ ಒಕ್ಕಲಿಗರ ರಾಮಮಂದಿರದಲ್ಲಿ ವಿನಾಯಕ ಚೌತಿಯ ದಿನದಂದು ಪ್ರತಿಷ್ಠಾಪನೆ ಮಾಡಿದ್ದ ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಉತ್ಸವ ವೈಭವದಿಂದ ನಡೆಯಿತು. ಮಹಾ ಗಣಪತಿಗೆ ಪ್ರಿಯವಾದ ಕಡುಬಿನ ಹಾರ ಹಾಕಿದ ಬಣ್ಣ‌ಬಣ್ಣ ಹೂವುಗಳಿಂದ ಶೃಂಗಾರ ಮಾಡಿದ ನಂತರ ಭಕ್ತಾದಿಗಳು ಗಣಪತಿಗೆ ಮಹಾ ಮಂಗಳಾರತಿ ಪೂಜಾ ಕಾರ್ಯಗಳು ನಡೆಯಿತು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಉತ್ಸವ ಉತ್ಸವ ನಡೆಯಿತು. ಉತ್ಸವಕ್ಕೆ ಕರಡೆ ವಾ,ದ್ಯ ತಮಟೆ ವಾದ್ಯಗಳು ಉತ್ಸವಕ್ಕೆ ಮೆರುಗು ನೀಡಿತು. ತಮಟೆ ವಾದ್ಯಕ್ಕೆ ಯುವಕರು ಕುಣಿದು ಕುಪ್ಪಳಿಸಿದರು‌‍.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡಕೆರೆಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು. ವಿನಾಯಕ ಭಕ್ತ ಮಂಡಳಿಯ ಸದಸ್ಯರು, ಗ್ರಾಮಸ್ಥರು, ಒಕ್ಕಲಿಗ ಸಮಾಜದ ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.