ಸಾರಾಂಶ
ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಸೇವಾರ್ಥಿಗಳ ಪರವಾಗಿ ವಿಪ್ರೊತ್ತಮರ ಸಹಕಾರದೊಂದಿಗೆ ಶ್ರೀ ಪಂಚದುರ್ಗ ನಮಸ್ಕಾರ ಪೂಜೆ ವೈಭವದಿಂದ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಸೇವಾರ್ಥಿಗಳ ಪರವಾಗಿ ವಿಪ್ರೊತ್ತಮರ ಸಹಕಾರದೊಂದಿಗೆ ಶ್ರೀ ಪಂಚದುರ್ಗ ನಮಸ್ಕಾರ ಪೂಜೆ ವೈಭವದಿಂದ ಸಂಪನ್ನಗೊಂಡಿತು.ಪಂಚವರ್ಣಾತ್ಮಕವಾಗಿ ರಚಿಸಲಾದ ಐದು ಮಂಡಲಗಳಲ್ಲಿ ಪಂಚ ದೀಪದಲ್ಲಿ ಪಂಚ ದುರ್ಗೆಯರಾದ ಮೂಲದುರ್ಗ, ಜಲದುರ್ಗ, ಅಗ್ನಿ ದುರ್ಗ, ಅಗ್ರ ದುರ್ಗ, ವನ ದುರ್ಗ ಎಂದು ಆಹ್ವಾಹಿಸಿ ಪೂಜಿಸಲಾಯಿತು.ಸಪ್ತಶತಿಯ ಸಾರವೆನಿಸಿದ ಸಪ್ತ ಶ್ಲೋಕಿ ಮಂತ್ರದಿಂದ ವಿಶೇಷವಾಗಿ ಪೂಜೆಗಾಗಿ ತರಿಸಲಾದ ದೈವಿಕ ಪುಷ್ಪದಿಂದ ಅರ್ಚನೆಗೊಳಿಸಿ ಶ್ರೀ ದುರ್ಗೆಯನ್ನು ಪ್ರಸನ್ನಗೊಳಿಸಲಾಯಿತು. ಬಹು ಫಲಪ್ರದವಾದಂತ ಈ ಪೂಜೆಯಲ್ಲಿ ಅಷ್ಟಾವಧಾನ ಸೇವೆಯನ್ನು ವೇದಮೂರ್ತಿ ರಾಘವೇಂದ್ರ ಭಟ್ ಹಾಗೂ ವೇದಮೂರ್ತಿ ವಿಖ್ಯಾತ್ ಭಟ್ ನೆರವೇರಿಸಿದರು.ಅಲ್ಲದೇ ವಿಶೇಷವಾಗಿ ನೃತ್ಯ ಸೇವೆಯನ್ನು ಡಾ. ಮಂಜರಿ ಚಂದ್ರ ಪುಷ್ಪರಾಜ್ ಅವರ ಶಿಷ್ಯೆಯಾದ ಜಾನಕಿ ಅವರು ನೆರವೇರಿಸಿದರು. ಮುರಳಿಧರ ಮುದ್ರಾಡಿ ಮತ್ತು ತಂಡದವರು ವಿಶೇಷವಾದ ನಾದಸ್ವರ ಸೇವೆ, ಚಂದ್ರಕಲಾ ಶರ್ಮ ಹಾಗೂ ಕ್ಷೇತ್ರದ ಸ್ವಾತಿ ಪ್ರತೀಕ್ ಭಟ್ ಅವರು ಸಂಗೀತ ಸೇವೆ ನೆರವೇರಿಸಿದರು.
ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕಾರಾಧನೇ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜು ತಿಳಿಸಿರುತ್ತಾರೆ.