ಶ್ರೀರಾಮ ಮಂದಿರ ಕನಸು ಸಾಕಾರ

| Published : Jan 03 2024, 01:45 AM IST

ಸಾರಾಂಶ

ಶ್ರೀರಾಮ ಮಂದಿರ ಕನಸು ಸಾಕಾರ: ಡಾ.ವೀರಣ್ಣ ಚರಂತಿಮಠ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಯೋಧ್ಯೆಯಲ್ಲಿ ಶ್ರೀರಾಮನ ಹೆಜ್ಜೆಗುರುತು, ರೋಚಕ ಇತಿಹಾಸದ ಭೂಮಿಯಲ್ಲಿ ಭವ್ಯ ಮಂದಿರದ ಕನಸು ಸಾಕಾರವಾಗಲಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು

ಅವರು ನವನಗರದ 61ನೇ ಸೆಕ್ಟರ್‌ನಲ್ಲಿ ಅಯೋಧ್ಯಾಪತಿ ಪ್ರಭು ಶ್ರೀ ರಾಮಚಂದ್ರ ಮಂತ್ರಾಕ್ಷತೆ, ಆಮಂತ್ರ ಮತ್ತು ಶ್ರೀ ರಾಮ ಮಂದಿರ ಫೋಟೋವನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಮನೆಯಲ್ಲಿ ಜ.22ರಂದು ದೇವರ ಕೋನೆಯಲ್ಲಿ ಶ್ರೀರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ಇಟ್ಟು ಪೂಜೆ ಸಲ್ಲಿಸಿ ದೀಪಾವಳಿಯಂತೆ ಮನೆಯಲ್ಲಿ ದೀಪಗಳನ್ನು ಬೆಳಗಿರಿ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ದಶಕಗಳ ನಿರೀಕ್ಷೆ ಕೈಗೂಡಲು ಮುಹೂರ್ತ ನಿಗದಿಯಾಗಿದೆ. ಭವ್ಯ ಮಂದಿರಲ್ಲಿ ಶ್ರೀ ರಾಮಲಲ್ಲಾನ ಪ್ರಭೆ ಪ್ರಜ್ವಲಿಸಲಿದೆ. ಸುಮಾರು 7 ಸಾವಿರ ಜನರಿಂದ ಮಂದಿರದ ಕಾರ್ಯ ಭರದಿಂದ ಸಾಗಿದೆ. ಎರಡು ಸಲ ಅಯೋಧ್ಯೆಗೆ ಭೇಟಿ ನೀಡಿದ್ದೇನೆ. ಅಯೋಧ್ಯ ನೋಡಿದಾಗ ಪ್ರಾಚೀನ ಪರಂಪರೆಯ ಕಣ್ಮುಂದೆ ಬರುತ್ತದೆ. ಕೋಟ್ಯಂತರ ಭಾರತೀಯರ ಕನಸು ನನಸಾಗುವ ಸಮಯ ಎಂದರು.

ಈ ವೇಳೆ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ರಾಜು ತಪಶೇಟ್ಟಿ, ನಗರಸಭೆ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಕುಮಾರ ಯಳ್ಳಿಗುತ್ತಿ, ಕುಮಾರಸ್ವಾಮಿ ಹಿರೇಮಠ, ಭಾಗೀರತಿ ಪಾಟೀಲ, ಬೂತ್ ಅಧ್ಯಕ್ಷ ವಿಶ್ವನಾಥ ಪಾಟೀಲ, ಮಹಾಂತೇಶ ಬಾದೊಡಗಿ, ಮಲ್ಲಿಕಾರ್ಜುನ ಮಠ, ರೇಣುಕಾಚಾರ್ಯ ಹಿರೇಮಠ, ಸಂತೋಷ ಜೋಶಿ, ಅಕ್ಷಯ ಬರಗಿ ಸೇರಿದಂತೆ ಭಾಗವಹಿಸಿದ್ದರು.