ಶ್ರೀರಾಮನಿಗೆ ಪೂಜೆ, ಅನ್ನಸಂತಪಣೆ

| Published : Jan 23 2024, 01:49 AM IST

ಸಾರಾಂಶ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿಂಧನೂರು ನಗರದ ಸೇರಿದಂತೆ ತಾಲೂಕಿನಾದ್ಯಂತ ರಾಮ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತಪಣೆ ಕಾರ್ಯಕ್ರಮ ನಡೆಸಿದರು.

ಸಿಂಧನೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿಂಧನೂರು ನಗರದ ಸೇರಿದಂತೆ ತಾಲೂಕಿನಾದ್ಯಂತ ರಾಮ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತಪಣೆ ಕಾರ್ಯಕ್ರಮ ನಡೆಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಶ್ರೀರಾಮ ಮೂರ್ತಿಯ ಬೃಹತ್ಕಾರದ ಕಟೌಟ್ ನಿಮಿಸಲಾಗಿದೆ. ಪಕ್ಕದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣರ ಎಲ್ಇಡಿ ಭಾವಚಿತ್ರವನ್ನು ಇರಿಸಿ ಹೂವುಗಳಿಂದ ಸಿಂಗರಿಸಲಾಗಿದೆ. ಸಾವಜನಿಕರು ಈ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಇದಲ್ಲದೆ ನಗರದ ಬಸ್ ನಿಲ್ದಾಣ ಎದುರುಗಡೆ ಖಾಲಿ ನಿವೇಶನದಲ್ಲಿ ಶ್ರೀರಾಮ ಭಕ್ತರು ಎಲ್ಇಡಿ ಟಿವಿ ಇಟ್ಟು ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮೂರ್ತಿಗೆ ಪ್ರಾಣ ಪ್ರತಿಷ್ಟಾಪನಾ ಕಾಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಬಂದ ಸಾವಿರಾರು ಭಕ್ತರು ಶ್ರೀರಾಮನಿಗೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿ ಅನ್ನದಾಸೋಹ ಸ್ವೀಕರಿಸಿದರು. ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ, ಶತಕೋಟಿ ರಾಮತಾರಕ ನಾಮ ಜಪ ಮಹಾಯಜ್ಞ ನಡೆಯಿತು.

ನಗರದ ಅಮರದೀಪ ಬಟ್ಟೆ ಅಂಗಡಿಯ ಪಕ್ಕದಲ್ಲಿ ಬಟ್ಟೆ ಮತ್ತು ರೆಡಿಮೆಂಟ್ ಅಂಗಡಿಗಳವತಿಯಿಂದ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ಕಾರದ ಶ್ರೀರಾಮನ ಬ್ಯಾನರ್ ಹಾಕಿ ಪೂಜೆ ಸಲ್ಲಿಸಲಾಯಿತು. ಇಲ್ಲಿಯೂ ಸಾವಜನಿಕರಿಗೆ ಲಡ್ಡು, ಕಲ್ಲಂಗಡಿ ಮತ್ತಿತರ ಸಿಹಿ ಪದಾಥಗಳನ್ನು ವಿತರಿಸಿದರು. ಲಘುವಾಹನ ಚಾಲಕರ ಸಂಘದ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಹಳೆಬಜಾರ್ನಲ್ಲಿರುವ ಛಾವಡಿ ಆಂಜನೇಯ ದೇವಸ್ಥಾನದ ಮುಂದೆಯೂ ಶ್ರೀರಾಮ ಎಲ್ಇಡಿ ಬ್ಯಾನರ್ ಹಾಕಿ ಹೂವುಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮ ವೃತ್ತದ ನಾಮಫಲಕವನ್ನು ಇದೇ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಓಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಬಿಜೆಪಿ ಮುಖಂಡ ಕೆ.ಕರಿಯಪ್ಪ ಸೇರಿದಂತೆ ಅನೇಕ ಮುಖಂಡರು ಎಲ್ಲ ಕಡೆ ತೆರಳಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.