ಸಾರಾಂಶ
ಪ್ರಾಣಿಪ್ರಿಯರಾದ ಸಾಲಿಗ್ರಾಮ ಪ್ರಾಣಿ ರಕ್ಷಣಾ ಕೆಂದ್ರದ ಸುಧೀಂದ್ರ ಐತಾಳ್, ಕಾಪು ಪ್ರಶಾಂತ್ ಪೂಜಾರಿ, ಬಿ. ರವೀಂದ್ರ ಹೆಬ್ಬಾರ್ ಬ್ರಹ್ಮಾವರ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಶಂಕರಪುರ
ಪ್ರಾಮಾಣಿಕವಾಗಿ ಪ್ರಾಣಿ ಪಕ್ಷಿಗಳ ಸೇವೆ ಮಾಡಿ, ಮಾನವೀಯ, ಮನುಷ್ಯತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೋ ಅದೇ ಭಗವಂತನ ಸೇವೆ. ಆ ನಿಟ್ಟಿನಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯು ಮಹತ್ವವನ್ನು ಪಡೆದುಕೊಳ್ಳಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಏಕ ಜಾತಿಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು.ಅವರು ನ.12ರಂದು ತಮ್ಮ ಜನ್ಮ ದಿನಾಚರಣೆಯಂಗವಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನದಲ್ಲಿ ನಡೆದ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಯಲ್ಲಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.
ಪಶು ಸಂಗೋಪನಾ ಇಲಾಖೆಯ ನಿವೃತ್ತ ಅಧಿಕಾರಿ ಬಿ. ರವೀಂದ್ರ ಹೆಬ್ಬಾರ್ ಬ್ರಹ್ಮಾವರ ಮಾತನಾಡಿ, ಗುರೂಜಿ ಅವರ ಪ್ರಾಣಿಪಕ್ಷಿಗಳ ಮೋಕ್ಷ ಸಂಕಲ್ಪದ ಜತೆಗೆ ಬೀದಿ ಶ್ವಾನ ಸಂರಕ್ಷಣೆಯ ಚಿಂತನೆಯು ಶ್ಲಾಘನೀಯ. ಸಮಾಜವೂ ಅದಕ್ಕೆ ಪೂರಕವಾಗಿ ಸ್ಪಂದಿಸಬೇಕಿದೆ ಎಂದರು.ಪ್ರಾಣಿಪ್ರಿಯರಾದ ಸಾಲಿಗ್ರಾಮ ಪ್ರಾಣಿ ರಕ್ಷಣಾ ಕೆಂದ್ರದ ಸುಧೀಂದ್ರ ಐತಾಳ್, ಕಾಪು ಪ್ರಶಾಂತ್ ಪೂಜಾರಿ, ಬಿ. ರವೀಂದ್ರ ಹೆಬ್ಬಾರ್ ಬ್ರಹ್ಮಾವರ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೊಸಬೆಳಕು ಆಶ್ರಮದ ತನುಲಾ, ದ್ವಾರಕಾಮಾಯಿ ಮಠದ ಟ್ರಸ್ಟಿ ಗೀತಾಂಜಲಿ ಎಂ. ಸುವರ್ಣ, ಗಣ್ಯರಾದ ವೀಣಾ ಎಸ್. ಶೆಟ್ಟಿ, ರಘುರಾಮ ಶೆಟ್ಟಿ ಕಾಪು, ವಿಕ್ಕಿ ಪೂಜಾರಿ ಮಡಂಬು, ನವೀನ್, ರಾಘವೇಂದ್ರ ಪ್ರಭು, ಗುರೂಜಿ ಆಪ್ತ ಸಹಾಯಕ ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ಅರ್ಚಕ ಶ್ರೀನಿವಾಸ ಉಡುಪ ಉಪಸ್ಥಿತರಿದ್ದರು. ದಾಮೋದರ ಶರ್ಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.