ಸಾರಾಂಶ
ಜಿ.ಎಸ್.ಬಿ. ಸಮಾಜದ ಶ್ರೀರಾಮ ಮಂದಿರದ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ‘ಶ್ರೀ ಸುಧೀಂದ್ರ ತೀರ್ಥ ನಿಲಯ’ ಅತಿಥಿಗೃಹವನ್ನು ಸೋಮವಾರ ಸಂಜೆ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಲ್ಪೆ
ಇಲ್ಲಿನ ಜಿ.ಎಸ್.ಬಿ. ಸಮಾಜದ ಶ್ರೀರಾಮ ಮಂದಿರದ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ‘ಶ್ರೀ ಸುಧೀಂದ್ರ ತೀರ್ಥ ನಿಲಯ’ ಅತಿಥಿಗೃಹವನ್ನು ಸೋಮವಾರ ಸಂಜೆ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ಇದಕ್ಕೆ ಮೊದಲು ಶ್ರೀಗಳನ್ನು ಚಂಡೆ, ಮಂಗಳವಾದ್ಯ ಹಾಗೂ ಪೂರ್ಣ ಕುಂಭಗಳೊಂದಿಗೆ ಬರಮಾಡಿಕೊಂಡು ಪಾದಪೂಜೆ ಮಾಡಿ ಫಲಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಶ್ರೀಗಳು ಶ್ರೀ ರಾಮದೇವರಿಗೆ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.ಉದ್ಘಾಟನೆಯ ನಂತರ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಉಡುಪಿಗೂ ಮಲ್ಪೆಗೂ ವಿಶೇಷ ನಂಟಿದೆ. ಮಧ್ವಾಚಾರ್ಯರು ಮಲ್ಪೆಯಲ್ಲಿ ಬಲರಾಮ ದೇವರನ್ನು, ಉಡುಪಿಯಲ್ಲಿ ಶ್ರೀಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದರು. ದೇವಾಲಯಗಳ ನಿರ್ಮಾಣದಿಂದ ಊರಿನ ಅಭಿವೃದ್ದಿ ಜೊತೆ ಸಮಾಜವು ಅಭಿವೃದ್ಧಿಯೂ ಆಗುತ್ತದೆ. ನಮ್ಮ ಪೂಜ್ಯ ಗುರುಗಳ ಜನ್ಮಶತಾಬ್ಧಿ ಆಚರಣೆಯ ಸವಿನೆನಪಿಗಾಗಿ ಶ್ರೀ ಸುಧೀಂದ್ರ ತೀರ್ಥ ನಿಲಯ ಅತಿಥಿಗೃಹ ನಿರ್ಮಾಣ ಮಾಡಿದ್ದೂ ಸಂತಸ ತಂದಿದೆ. ಗುರುವಿನ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಇರಲಿ ಎಂದು ಹಾರೈಸಿದರು.ಸಮಾರಂಭದಲ್ಲಿ ವೇದಮೂರ್ತಿ ಶ್ರೀಕಾಂತ್ ಭಟ್, ವೇದಮೂರ್ತಿ ಚೇ೦ಪಿ ರಾಮಚಂದ್ರ ಭಟ್, ಜಯದೇವ್ ಭಟ್, ಗಣಪತಿ ಭಟ್, ಮಂದಿರದ ಅರ್ಚಕರಾದ ಶೈಲೇಶ್ ಭಟ್, ಜಗನನಾಥ್ ಕಾಮತ್, ಶಿರಿಯಾರ ಗಣೇಶ್ ನಾಯಕ್, ರಾಮಮಂದಿರದ ಅಧ್ಯಕ್ಷ ಗೋಕುಲ್ ದಾಸ್ ಪೈ, ರಾಮಾಂಜನೇಯ ಸೇವಾ ಟ್ರಸ್ಟಿನ ಉಪಾಧ್ಯಕ್ಷ ವಿಶ್ವನಾಥ್ ಭಟ್, ಜಿ.ಎಸ್.ಬಿ. ಮಹಿಳಾ ಮಂಡಳಿ ಅಧ್ಯಕ್ಷರಾದ ಶಾಲಿನಿ ಪೈ, ಸುಧೀರ್ ಶೆಣೈ, ಅನಿಲ್ ಕಾಮತ್, ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.