ಸಾರಾಂಶ
ಹುನಗುಂದ ಪಟ್ಟಣದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶಿವಾನಂದ ಕಂಠಿ, ಉಪಾಧ್ಯಕ್ಷರಾಗಿ ಅನ್ನಪೂರ್ಣ ಶರಣಪ್ಪ ಹೊಸೂರ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಹುನಗುಂದಪಟ್ಟಣದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶಿವಾನಂದ ಕಂಠಿ, ಉಪಾಧ್ಯಕ್ಷರಾಗಿ ಅನ್ನಪೂರ್ಣ ಶರಣಪ್ಪ ಹೊಸೂರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಸಂಘದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ಎನ್. ಪೋಲಿಸ್‌ಪಾಟೀಲ ಘೋಷಿಸಿದರು.ನಿರ್ದೇಶಕರಾದ ಅಧ್ಯಕ್ಷ ರವಿ ಹುಚನೂರ, ದೇವು ಡಂಬಳ, ಶಶಿಕಾಂತ ಪಾಟೀಲ, ರಾಜಕುಮಾರ ಬಾದವಾಡಗಿ, ಬಸವರಾಜ ನಾಡಗೌಡ್ರ, ಸೋಮಶೇಖರ ಬಲಕುಂದಿ, ಮಂಜುನಾಥ ಆಲೂರ, ಸಂಗಣ್ಣ ಕಡಪಟ್ಟಿ, ಮಹಾಂತೇಶ ಅವಾರಿ, ನೀಲಪ್ಪ ತಪೇಲಿ, ಬಸವರಾಜ ಗದ್ದಿ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಶಕುಂತಲಾ ಗಂಜೀಹಾಳ, ಸುಜಾತಾ ನಾಗರಾಳ, ತಿರುಪತಿ ಕುಷ್ಠಗಿ, ಪ್ರಧಾನ ಮುಖ್ಯವ್ಯವಸ್ಥಾಪಕ ಕೆ.ಎಸ್. ಆಲದಿ, ಜಗದೀಶ ಪಾಟೀಲ, ಗಿರೀಶ ಪಾಟೀಲ, ಬಿ.ಬಿ. ಆರೇಗೌಡರ, ರಾಜು ಬಯ್ಯಾಪೂರ, ಕೆ.ಜಿ. ಬಂಗಾರಿ, ಆರ್.ವಿ.ಪಾಟೀಲ, ಬಸವರಾಜ ಬೆಣ್ಣಿ ಬ್ಯಾಂಕಿನ ಎಲ್ಲ ಸಿಬ್ಬಂದಿ ಇದ್ದರು.