ಚನ್ನರಾಯಪಟ್ಟಣದಲ್ಲಿ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ

| Published : Dec 02 2024, 01:21 AM IST

ಸಾರಾಂಶ

ಸಮಾಜದಲ್ಲಿ ಮನಷ್ಯ ಸಂಬಂಧವನ್ನು ಮಾನವಿಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಮಾನವೀಯ ಸಂಬಂಧಗಳು ನೆಲೆಗೊಳ್ಳಲು ನಾಟಕಗಳನ್ನು ನಡೆಸುತ್ತಾ ಬಂದಿದ್ದು ಕಲೆಯನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಡಿ.೨ರಂದು ಬೆಳಗ್ಗೆ ೧೧.೩೦ಕ್ಕೆ ಶ್ರೀಕೃಷ್ಣ ಸಂಧಾನ ಅಥವಾ ಛಲದೋಳ್ ದುರ್ಯೋಧನ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದಮ್ಮನಿಂಗಲ ಮಂಜುನಾಥ್ ತಿಳಿಸಿದರು.

ಚನ್ನರಾಯಪಟ್ಟಣ: ಶ್ರೀ ಕೆಂಪೇಗೌಡ ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ಕರ್ನಾಟಕ ಬ್ಯಾಂಕ್ ಹತ್ತಿರ ಡಿ.೨ರಂದು ಬೆಳಗ್ಗೆ ೧೧.೩೦ಕ್ಕೆ ಶ್ರೀಕೃಷ್ಣ ಸಂಧಾನ ಅಥವಾ ಛಲದೋಳ್ ದುರ್ಯೋಧನ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದಮ್ಮನಿಂಗಲ ಮಂಜುನಾಥ್ ತಿಳಿಸಿದರು.

ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಮನಷ್ಯ ಸಂಬಂಧವನ್ನು ಮಾನವಿಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಮಾನವೀಯ ಸಂಬಂಧಗಳು ನೆಲೆಗೊಳ್ಳಲು ನಾಟಕಗಳನ್ನು ನಡೆಸುತ್ತಾ ಬಂದಿದ್ದು ಕಲೆಯನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಶ್ರವಣಬೆಳಗೊಳದ ಕೆಂಪೇಗೌಡ ವೇದಿಕೆ ವತಿಯಿಂದ ನಾಟಕವನ್ನು ಪ್ರದರ್ಶಿಸಲಿದ್ದು ಅಧ್ಯಕ್ಷತೆಯನ್ನು ಶಾಸಕ ಸಿ. ಎನ್. ಬಾಲಕೃಷ್ಣ ವಹಿಸಲಿದ್ದು, ಉದ್ಘಾಟನೆಯನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಅಲ್ತಾಫ್ ಪಾಷಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಮಮತಾ ರಮೇಶ್, ಆರ್‌ಎಂಸಿ ಮಾಜಿ ಅಧ್ಯಕ್ಷೆ ಶಿಲ್ಪಾಶ್ರೀನಿವಾಸ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಜಗನ್ನಾಥ್ ವಹಿಸಲಿದ್ದಾರೆ ಎಂದರು.