ಕುಶಾಲನಗರ: ಶ್ರೀಮದ್ ಭಗವದ್ಗೀತಾ ಪ್ರವಚನ ‘ಸರ್ವಂ ಕೃಷ್ಣಾರ್ಪಣಂ’

| Published : Feb 16 2025, 01:46 AM IST

ಕುಶಾಲನಗರ: ಶ್ರೀಮದ್ ಭಗವದ್ಗೀತಾ ಪ್ರವಚನ ‘ಸರ್ವಂ ಕೃಷ್ಣಾರ್ಪಣಂ’
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ನಡೆದ ಶ್ರೀಮದ್‌ ಭಗವದ್ಗೀತಾ ಪ್ರವಚನ ಸರ್ವಂ ಕೃಷ್ಣಾರ್ಪಣಂ ಕಾರ್ಯಕ್ರಮವನ್ನು ಆಧ್ಯಾತ್ಮಿಕ ಚಿಂತಕಿ ಡಾ.ವೀಣಾ ಬನ್ನಂಜೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಂಸ್ಕೃತ ಭಾರತಿ, ಭಗವದ್ಗೀತಾ ಬಳಗ, ಕೋಟಿ ಗೀತಾ ಲೇಖನ ಯಜ್ಞಾ ಸಮಿತಿ ಹಾಗೂ ರಂಗಭಾರತಿ ಕಮಾಮಂದಿರಮ್ ಸಹಯೋಗದಲ್ಲಿ ಕುಶಾಲನಗರದಲ್ಲಿ ನಡೆದ ಶ್ರೀಮದ್ ಭಗವದ್ಗೀತಾ ಪ್ರವಚನ ‘ಸರ್ವಂ ಕೃಷ್ಣಾರ್ಪಣಂ’ ಕಾರ್ಯಕ್ರಮವನ್ನು ಆಧ್ಯಾತ್ಮಿಕ ಚಿಂತಕಿ ಡಾ ವೀಣಾ ಬನ್ನಂಜೆ ಉದ್ಘಾಟಿಸಿದರು.

ಈ ಸಂದರ್ಭ ಪ್ರವಚನ ನೀಡಿದ ಅವರು, ಧರ್ಮರಾಯ ಎಂದೇ ಬಿಂಬಿಸಲಾಗುವ ಯುಧಿಷ್ಠಿರ ಧರ್ಮನಿಷ್ಠ. ಆದರೆ ಭಾರತದ ಬಹುತೇಕ ವಿದ್ವಾಂಸರು ಅರ್ಜುನನ್ನು ಹೇಡಿ, ನಪುಂಸಕ ಎಂದು ಲೇವಡಿ ಮಾಡಿದ್ದಾರೆ. ಗುರು-ಶಿಷ್ಯರ ಉತ್ತಮ ಮಾದರಿಯಾಗಿ ಕೃಷ್ಣ ಮತ್ತು ಅರ್ಜುನ ನಿಲ್ಲುತ್ತಾರೆ. ಕೃಷ್ಣ, ಅರ್ಜುನನ ಆಯ್ಕೆ ಅಲ್ಲ. ಕೃಷ್ಣನೇ ಅರ್ಜುನನನ್ನು ಮೊದಲೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ವಿಶ್ಲೇಷಿಸಿದರು.

ಮಹಾಭಾರತದ ಅಷ್ಟೂ ಬೆಳವಣಿಗೆಯಲ್ಲಿ ಕೃಷ್ಣ ಇದ್ದರೂ ಆದರೆ ಇದರ ಅರಿವು ಅರ್ಜುನನಿಗೆ ಇರಲಿಲ್ಲ. ಕೃಷ್ಣ ಏನು ಎನ್ನುವುದು ಅರ್ಜುನನಿಗೆ ಗೊತ್ತಾಗಲು ಭಗವದ್ಗೀತೆ ಅಗತ್ಯತೆ ಬೇಕಾಯಿತು.

ಅರ್ಜುನ ಯುದ್ಧಭೂಮಿಯಲ್ಲಿ ಪ್ರದರ್ಶಿಸಿದ್ದು ಹೇಡಿತನ ಅಲ್ಲ. ಅದು ಆತ ಭಗವಂತನಿಂದ ಪರೀಕ್ಷೆಗೆ ಒಳಗಾದ ಕ್ಷಣವಾಗಿರಬಹುದು ಎಂದು ವಿಶ್ಲೇಷಿಸಿದರು.

ನಾನು ಎಂದುಕೊಳ್ಳುವವನಿಗೆ ಸಾವು ಬದುಕಿನ ಚಕ್ರದಿಂದ ಮುಕ್ತಿ ಸಿಗುವುದಿಲ್ಲ. ಎಲ್ಲದರಲ್ಲೂ ಕೃಷ್ಣನನ್ನು ಕಾಣುವವರು, ಸಕಲ ಕಾರ್ಯವನ್ನು ಕೃಷ್ಣನಿಗೆ ಅರ್ಪಿಸುವವರು ಮುಕ್ತಿಯ ಮಾರ್ಗ ತಲುಪುತ್ತಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕೋಟಿ ಗೀತಾ ಯಜ್ಞ ಸಂಚಾಲಕ ಎಸ್.ಕೆ. ಸತೀಶ್, ಸಂಸ್ಕೃತ ಭಾರತಿ ಸಂಯೋಜಕಿ ಸುನಂದಾ, ಭಗವದ್ಗೀತೆ ಬಳಗ ಪ್ರಮುಖರಾದ ಪಾರ್ವತಿ, ನಿವೃತ್ತ ಶಿಕ್ಷಕ ಉ.ರಾ.‌ನಾಗೇಶ್, ರಂಗಭಾರತಿಯ ಸಂಚಾಲಕ ಜನಾರ್ದನ ವಸಿಷ್ಠ, ಶೋಭಾ ಭಟ್, ಪಲ್ಲವಿ ಇದ್ದರು.

ಪುಟಾಣಿಗಳಾದ ಪ್ರಣಮ್ಯ, ಪುನರ್ವಿ ಗಣಪತಿ ಸ್ತುತಿ ಭಜಿಸಿದರು. ಸಂಸ್ಕೃತದಲ್ಲಿ ನಿರೂಪಣೆ ಗಮನ ಸೆಳೆಯಿತು.