ಸಾರಾಂಶ
ಭಾಗವತರಾಗಿ ಆನಂದ ಅಂಕೋಲಾ, ವೇಣುಗೋಪಾಲ ಪುರಪ್ಪೆಮನೆ, ಕೃಷ್ಣಯ್ಯ ಆಚಾರ್, ಮದ್ದಲೆ ವಾದಕರಾಗಿ ಸೀತಾರಾಮ ಭಂಡಾರಿ, ಪದ್ಮರಾಜ ಜೈನ್ ಮಾವಿನಗುಂಡಿ, ಚಂಡೆ ವಾದಕರಾಗಿ ಧನಂಜಯ ನಾಯ್ಕ ಪುರದಮಠ ಹಾಗೂ ಹರೀಶ ಗೌಡ ಹಿಮ್ಮೇಳದಲ್ಲಿ ಪಾಲ್ಗೊಂಡು ಯಕ್ಷಗಾನದ ಯಶಸ್ಸಿಗೆ ಕಾರಣರಾದರು.
ಯಲ್ಲಾಪುರ: ಶ್ರೀ ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಿಗಂದೂರು ಮತ್ತು ಯಕ್ಷಾಭಿಮಾನಿ ಬಳಗ ಮಂಚಿಕೇರಿ ಇವುಗಳ ಆಶ್ರಯದಲ್ಲಿ ತಾಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಸ್ಥಾನದ ಆವಾರದಲ್ಲಿ ನಡೆದ ಶ್ವೇತಕುಮಾರ ಚರಿತ್ರೆ ಎಂಬ ಯಕ್ಷಗಾನ ಬಯಲಾಟ ಪ್ರೇಕ್ಷಕರನ್ನು ರಂಜಿಸಿತು.
ಭಾಗವತರಾಗಿ ಆನಂದ ಅಂಕೋಲಾ, ವೇಣುಗೋಪಾಲ ಪುರಪ್ಪೆಮನೆ, ಕೃಷ್ಣಯ್ಯ ಆಚಾರ್, ಮದ್ದಲೆ ವಾದಕರಾಗಿ ಸೀತಾರಾಮ ಭಂಡಾರಿ, ಪದ್ಮರಾಜ ಜೈನ್ ಮಾವಿನಗುಂಡಿ, ಚಂಡೆ ವಾದಕರಾಗಿ ಧನಂಜಯ ನಾಯ್ಕ ಪುರದಮಠ ಹಾಗೂ ಹರೀಶ ಗೌಡ ಹಿಮ್ಮೇಳದಲ್ಲಿ ಪಾಲ್ಗೊಂಡು ಯಕ್ಷಗಾನದ ಯಶಸ್ಸಿಗೆ ಕಾರಣರಾದರು.ಸ್ತ್ರೀ ಭೂಮಿಕೆಯಲ್ಲಿ ಷಣ್ಮುಖ ಗೌಡ ಬಿಳೇಗೋಡು, ಮಾರುತಿ ಚಿಕ್ಕನಗೋಡು, ಮಹೇಶ ವಂದಿಗೆ, ಗಣೇಶ ಆಚಾರಿ, ಪುರುಷ ಪಾತ್ರದಲ್ಲಿ ನರಸಿಂಹ ಚಿಟ್ಟಾಣಿ, ಮಂಜುನಾಥ ಶೆಟ್ಟಿ ನಾಣಿಕಟ್ಟಾ, ಪುರುಷೋತ್ತಮ ಶಿರಾಲಿ, ಉದಯ ಕಲ್ಲಾಳ, ತಿಲಕರಾಜ ದೀವಳ್ಳಿ, ನಾರಾಯಣ ಗೌಡ, ಗೋಪಾಲ ಗೌಡ, ಮದ್ದೂರು ರಾಮ ಕುಲಾಲ, ಮಹೇಶ ಕಲ್ಲಾಳ, ಹಾಸ್ಯ ಪಾತ್ರದಲ್ಲಿ ಹಾಲಾಡಿ ಚಂದ್ರ ಕುಲಾಲ ಮತ್ತು ದೇವೇಂದ್ರ ಇಡುವಾಣಿ ವಿವಿಧ ಪಾತ್ರಗಳಲ್ಲಿ ಮಿಂಚಿದರು.
ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ರಾಮ ಹೆಗಡೆ ಕಬ್ಬಿನಗದ್ದೆ, ಮಾರುತಿ ಬೋವಿವಡ್ಡರ್, ಚಂದ್ರಶೇಖರ ನಾಯಕ, ಸೋಮಣ್ಣ ಸಂಕದಗುಂಡಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಂಚಿಕೇರಿಯ ಮದ್ದಲೆವಾದಕ ವಿಠ್ಠಲ್ ಅಣ್ಣಪ್ಪ ಪೂಜಾರಿ ಹಾಗೂ ಪ್ರಶಾಂತ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.ದೇವಸ್ಥಾನದ ಧರ್ಮದರ್ಶಿ ಡಾ. ಎಸ್. ರಾಮಪ್ಪಜಿಯವರ ೭೧ನೇ ಜನ್ಮದಿನೋತ್ಸವದ ನಿಮಿತ್ತ ಕಾರ್ಯಕ್ರಮದಲ್ಲಿ ಶುಭಕಾಮನೆ ಸಲ್ಲಿಸಲಾಯಿತು. ಶಿಕ್ಷಕ ನಾರಾಯಣ ಶೇರುಗಾರ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.