ಸಾರಾಂಶ
ಉಚಿತ ಆರೋಗ್ಯ ತಪಾಸಣೆಯಲ್ಲಿ ಉದ್ಘಾಟನೆ ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಆಹಾರ ಪದ್ದತಿಯಲ್ಲೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದು ನಂದಿಪುರ ಸುಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಸುಭಿಕ್ಷಾ ಆರೋಗ್ಯ ಕೇಂದ್ರದಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ಪ್ರತಿಷ್ಠಾನದಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಾಖೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜಗತ್ತಿನ ಒತ್ತಡದ ಬದುಕು ಅನಾರೋಗ್ಯಕ್ಕೆ ದಾರಿ ಮಾಡುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ರೋಗಕ್ಕೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ. ಆಯುರ್ವೇದ ಔಷಧಿಗಳಿಂದ ಅಡ್ಡಪರಿಣಾಮಗಳಿಲ್ಲ. ಹಿತಮಿತ ಆಹಾರ, ಯೋಗ, ಧ್ಯಾನ, ಭಜನೆ ಸೇರಿ ನಾನಾ ಧನಾತ್ಮಕ ಚಟುವಟಿಕೆಗಳು ವ್ಯಕ್ತಿಯನ್ನು ರೋಗ ಮತ್ತು ಔಷಧಿಗಳಿಂದ ದೂರ ಉಳಿಸುತ್ತವೆ. ಆಹಾರ ಪದ್ದತಿಯಲ್ಲಿ ಸಮತೋಲನತೆ ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದರು.ಪಾರಂಪರಿಕ ವೈದ್ಯ ಡಾ. ವಿ.ಮಂಜುನಾಥ ಮಾತನಾಡಿ, ಅತಿಯಾದ ಆಸೆಯಿಂದಾಗಿ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಔಷಧಿಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಮನುಷ್ಯನ ತೇಜಸ್ಸು ಕುಂದುತ್ತದೆ. ಪಾರಂಪರಿಕ ಔಷಧಿಗಳನ್ನು ಆಯುರ್ವೇದ ವೈದ್ಯರ ಸೂಚನೆಯಂತೆ ಉಪಯೋಗಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿದರು. ಇದೇ ವೇಳೆ ಬಿಪಿ, ಶುಗರ, ಅಧಿಕ ತೂಕ, ಬೊಜ್ಜು ನಿಯಂತ್ರಣ ಕುರಿತು ಆರೋಗ್ಯ ಸಲಹೆ ಮತ್ತು ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು. ಮಕ್ಕಳಿಗೆ ಪುಷ್ಯ ನಕ್ಷತ್ರದ ಹಿನ್ನೆಲೆ ಸ್ವರ್ಣ ಬಿಂದು ಪ್ರಾಶನ ಮಾಡಲಾಯಿತು. ಆಯುಷ್ ವೈದ್ಯಾಧಿಕಾರಿ ಡಾ. ಹಾಲಮ್ಮ ಮಾಹಿತಿ ನೀಡಿದರು. ನಂದೀಶ್ವರ ಬ್ಯಾಂಕ್ ಅಧ್ಯಕ್ಷ ಎನ್.ವೆಂಕಣ್ಣ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್, ಗುರು ದೊಡ್ಡಬಸವೇಶ್ವರ ಸೇವಾ ಸಮಿತಿಯ ಎಸ್.ಎಂ. ಸದ್ಯೋಜಾತಯ್ಯ, ತೆಗ್ಗಿನ ಮಠದ ಕಾರ್ಯದರ್ಶಿ ಚಂದ್ರಶೇಖರ ಸ್ವಾಮಿ, ವೀರಣ್ಣ, ಡಾ. ಜಂಬಣ್ಣ ಯಲಗಚ್ಚಿನ, ವಾಮನಗೌಡ, ದೇವಿಪುತ್ರಪ್ಪ ಇದ್ದರು. ನಾಗೇಂದ್ರಸ್ವಾಮಿ ಕರಿಬಸವನಗೌಡ ನಿರ್ವಹಿಸಿದರು.