ಸಿದ್ದಗಂಗಾ ಶ್ರೀ 118ನೇ ಜನ್ಮ ದಿನೋತ್ಸವ ರಾಷ್ಟ್ರಪತಿಗೆ ಆಹ್ವಾನ

| Published : Feb 14 2025, 12:34 AM IST

ಸಾರಾಂಶ

ಡಾ.ಶಿವಕುಮಾರ ಮಹಾಸ್ವಾಮಿಜಿಯವರ 118ನೇ ಜನ್ಮ ದಿನೋತ್ಸವದ ಅಂಗವಾಗಿ ಏಪ್ರಿಲ್ 1ರಂದು ನಡೆಯಲಿರುವ ಗುರುವಂದನಾ ಸಂಭ್ರಮಾಚರಣೆ

ತುಮಕೂರು:ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ಹಾಗೂ ಸಂಸದ ವಿ.ಸೋಮಣ್ಣ ಗುರುವಾರ ನವದೆಹಲಿಯಲ್ಲಿ ಘನವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಜಿಯವರ 118ನೇ ಜನ್ಮ ದಿನೋತ್ಸವದ ಅಂಗವಾಗಿ ಏಪ್ರಿಲ್ 1ರಂದು ನಡೆಯಲಿರುವ “ಗುರುವಂದನಾ ಸಂಭ್ರಮಾಚರಣೆಗೆ” ಆಗಮಿಸುವಂತೆ ಆಹ್ವಾನ ನೀಡಿದರು.ಶ್ರೀ ಮಠದ ಪರಂಪರೆ ಹಾಗೂ ಶಿವಕುಮಾರ ಸ್ವಾಮಿಜಿಯವರ ಬಗ್ಗೆ ಅಪಾರ ಗೌರವ ತೋರಿದ ರಾಷ್ಟ್ರಪತಿಗಳು ಆಹ್ವಾನವನ್ನು ಅತ್ಯಂತ ಭಕ್ತಿಭಾವದಿಂದ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತಾಗಿ ರಾಷ್ಟ್ರಪತಿ ಕಾರ್ಯಲಯದಿಂದ ಸೂಕ್ತ ದಿನಾಂಕವನ್ನು ಶೀಘ್ರವಾಗಿ ತಿಳಿಸಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.