ಕಗ್ಗೆರೆಯಲ್ಲಿ ಸಿದ್ದಲಿಂಗೇಶ್ವರರ ಅದ್ಧೂರಿ ಮಹಾರಥೋತ್ಸವ

| Published : Mar 07 2025, 12:46 AM IST

ಸಾರಾಂಶ

ಯಡಿಯೂರು ಸಿದ್ದಲಿಂಗೇಶ್ವರರ ತಪೋಭೂಮಿ ತಪೋ ಕ್ಷೇತ್ರ ಕಗ್ಗೆರೆಯಲ್ಲಿ ಸಾವಿರ ಭಕ್ತರ ಸಮ್ಮುಖದಲ್ಲಿ ಮಹಾರಾಥೋತ್ಸ ಅದ್ಧೂರಿಯಾಗಿ ನಡೆಯಿತು

ಕನ್ನಡಪ್ರಭ ವಾರ್ತೆ, ಕುಣಿಗಲ್

ಯಡಿಯೂರು ಸಿದ್ದಲಿಂಗೇಶ್ವರರ ತಪೋಭೂಮಿ ತಪೋ ಕ್ಷೇತ್ರ ಕಗ್ಗೆರೆಯಲ್ಲಿ ಸಾವಿರ ಭಕ್ತರ ಸಮ್ಮುಖದಲ್ಲಿ ಮಹಾರಾಥೋತ್ಸ ಅದ್ಧೂರಿಯಾಗಿ ನಡೆಯಿತು

ಮಧ್ಯಾಹ್ನ 12:30ಕ್ಕೆ ಅಭಿಜಿನ್ ಲಗ್ನದಲ್ಲಿ ಶ್ರೀ ಸಿದ್ದಲಿಂಗೇಶ್ವರ ವಿಗ್ರಹವನ್ನು ದೇವಾಲಯದಿಂದ ರಥದ ಮೇಲೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿಮೇಳ ಹಾಗೂ ನಂದಿದ್ವಜ ಸೇರಿದಂತೆ ಛತ್ರಿ ಚಾಮರಗಳು ಹಾಗೂ ಭಕ್ತರ ಜಯ ಘೋಷದೊಂದಿಗೆ ಸ್ವಾಮಿಯನ್ನು ಕರೆತರಲಾಯಿತು.

ಷಟ್‌ಸ್ಥಲ ಧ್ವಜ ಹರಾಜು ಪ್ರಕ್ರಿಯೆ ಪ್ರಾರಂಭವಾದಾಗ ಸರ್ಕಾರದ ವತಿಯಿಂದ ಎರಡು ಲಕ್ಷಕ್ಕೆ ಬಿಡ್‌ ಪ್ರಕಟಗೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತ , ಡಿಕೆ ಶಿವಕುಮಾರ್ ಅಭಿಮಾನಿ ಜಿಕೆ ಗಂಗಣ್ಣ ಎಂಬ ವ್ಯಕ್ತಿ ಎರಡು ಲಕ್ಷ ರು.ಪಾಯಿಗಳಿಗೆ ಕೂಗಿದರು. ನಂತರ ಡಿಕೆ ಶಿವಕುಮಾರ್ ಹೆಸರಿನಲ್ಲಿ ಧ್ವಜ ಹಿಡಿದ ಜಿಕೆ ಗಂಗಣ್ಣ ಅವರನ್ನು ದೇವಾಲಯದ ನಿಯಮದಂತೆ ರಥದ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಯಿತು. ನಂದಿಧ್ವಜ ಪೂಜೆಯನ್ನು ಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ‍್ಯ ಸ್ವಾಮೀಜಿ, ಆನಂದ್ ಗುರೂಜಿ, ಕುಣಿಗಲ್ ತಹಸೀಲ್ದಾರ್ ರಶ್ಮಿ, ಕಗ್ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪಾ ಗೋಪಾಲಯ್ಯ ಸದಸ್ಯ ದೇವರಾಜು ನಾಗರಾಜು ಪೂಜ ನೆರವೇರಿಸಿದರು. ರಥೋತ್ಸವಕ್ಕೆ ಸಾಂಪ್ರದಾಯಿಕವಾಗಿ ಹೊಳಲುಗುಂದದ ವಿಶ್ವಕರ್ಮ ಸಮುದಾಯದವರ ವತಿಯಿಂದ ವಿಶೇಷವಾದ ಪೂಜೆ ಸಲ್ಲಿಸಲಾಯಿತು.

ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯ ಮತ್ತು ಗೋಪುರ ಸೇರಿದಂತೆ ಕ್ಷೇತ್ರದ ಹಲವಾರು ವಿವಿಧ ಮರಗಿಡಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಅತಿಯಾದ ಬಿಸಿಲಿನ ತಾಪವನ್ನು ನಿಯಂತ್ರಿಸಲು ದೇವಾಲಯದ ವತಿಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು ಬಿಸಿಲನ್ನು ಲೆಕ್ಕಿಸದೆ ಭಕ್ತರು ಸಿದ್ಧಲಿಂಗೇಶ್ವರನ ರಥಕ್ಕೆ ಹಣ್ಣು ದವನ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.