ಸಾರಾಂಶ
ಮಾ.26 ರಂದು ಬೆಳಗ್ಗೆ 6 ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮತ್ತು ಮಹಾ ಮಂಗಳಾರತಿ ಬೆಳಗಲಿದೆ. ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಏರ್ಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ನೀಲಗಾರ ಪರಂಪರೆಯ ಪ್ರಮುಖ ಆರಾಧ್ಯ ದೈವ ಸಿದ್ದಪ್ಪಾಜಿಸ್ವಾಮಿ ಜಾತ್ರಾ ಮಹೋತ್ಸವ ಸಮೀಪದ ಚಿಲ್ಲಾಪುರ ಗ್ರಾಮದಲ್ಲಿ ಸೋಮವಾರದಿಂದ ಸಡಗರ ಸಂಭ್ರಮದಿಂದ ಆರಂಭವಾಯಿತು.ಮೂರು ದಿನಗಳ ಕಾಲ ನಡೆಯುವ ಜಾತ್ರೋತ್ಸವದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಗೆ ಪುಣ್ಯಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ 12 ಗಂಟೆಗೆ ಸಿದ್ದಪ್ಪಾಜಿ ಸ್ವಾಮಿ ಗದ್ದಿಗೆ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಮಧ್ಯಾಹ್ನ 2 ಗಂಟೆಗೆ ಶ್ರೀಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ಥಾನದಿಂದ ಉತ್ಸವದೊಂದಿಗೆ ಸ್ವಾಮಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಹಲಗೂರು ವಿಶ್ವಕರ್ಮ ಕುಲಭಾಂದವರಿಂದ ಚಿಲ್ಲಾಪುರ ಸಿದ್ದಪ್ಪಾಜಿ ದೇವಾಲಯದ ಆವರಣದಲ್ಲಿ ಚಂದ್ರಮಂಡೋಲತ್ಸವ ಮತ್ತು ರಾತ್ರಿ 9 ಗಂಟೆಗೆ ಫಲಹಾರ ಪೂಜೆ ನಡೆಯಿತು.ಮಾ.26 ರಂದು ಬೆಳಗ್ಗೆ 6 ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮತ್ತು ಮಹಾ ಮಂಗಳಾರತಿ ಬೆಳಗಲಿದೆ. ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಏರ್ಪಡಿಸಲಾಗಿದೆ.
ಮಾ.27 ರಂದು ಬೆಳಗ್ಗೆ 6 ಗಂಟೆಯಿಂದ ಚಿಲ್ಲಾಪುರ ಗ್ರಾಮದ ಕುಲಬಾಂಧವರಿಂದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆಳಗ್ಗೆ 9 ಗಂಟೆಗೆ ಹಲಗೂರು ಕುಲಭಾಂದವರಿಂದ ಶ್ರೀಸಿದ್ದಪ್ಪಾಜಿ ಸ್ವಾಮಿ ಜಯಂತ್ಯೋತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.