ತಮ್ಮ ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಡಿ. ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ, ಇಬ್ಬರು ಕೂಡ ಕುರ್ಚಿ ಆಸೆಗಾಗಿ ಬ್ರೇಕ್ ಪಾಸ್ಟ್ ಗಿಮಿಕ್ ಮಾಡುತ್ತಿದ್ದಾರೆ. ಇಬ್ಬರ ಮನಸ್ಸುಗಳೆ ಬ್ರೇಕ್ ಆಗಿರುವಾಗ, ಇನ್ನೆಲ್ಲಿ ಬ್ರೇಕ್ ಫಾಸ್ಟ್ ಸಭೆಗಳು, ಈ ನೆಪದಲ್ಲಿ ತೆಪೆ ಹಚ್ಚುವ ಕೆಲಸ ಸಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ತಮ್ಮ ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಡಿ. ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ, ಇಬ್ಬರು ಕೂಡ ಕುರ್ಚಿ ಆಸೆಗಾಗಿ ಬ್ರೇಕ್ ಪಾಸ್ಟ್ ಗಿಮಿಕ್ ಮಾಡುತ್ತಿದ್ದಾರೆ. ಇಬ್ಬರ ಮನಸ್ಸುಗಳೆ ಬ್ರೇಕ್ ಆಗಿರುವಾಗ, ಇನ್ನೆಲ್ಲಿ ಬ್ರೇಕ್ ಫಾಸ್ಟ್ ಸಭೆಗಳು, ಈ ನೆಪದಲ್ಲಿ ತೆಪೆ ಹಚ್ಚುವ ಕೆಲಸ ಸಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಅಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಜಾಗೃತಿಗಾಗಿ ಭೀಮನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಬ್ಬರು ನಾಯಕರು ಬ್ರೇಕ್ ಫಾಸ್ಟ್ ಗೆ ಸೇರಿರುವುದು ರೈತರ ಅಥವಾ ನಾಡಿನ ಜನರ ಸಮಸ್ಯೆ ನಿವಾರಣೆಗಾಗಿ ಅಲ್ಲ, ಅಥವಾ ದಲಿತರ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಅಲ್ಲ, ಕಾಂಗ್ರೆಸ್ ನಲ್ಲಿ ದಲಿತರಿಗೆ ಸಿಎಂ ಹುದ್ದೆ ಸಿಗಲ್ಲ, ಮುಂದೆ ಸಂಪುಟ ವಿಸ್ತರಣೆ ವೇಳೆ ಎಚ್. ಸಿ. ಮಹದೇವಪ್ಪ, ಮುನಿಯಪ್ಪ, ಪರಮೇಶ್ವರ್ ಅವರನ್ನು ಸಹಾ ಕೈಬಿಡಲಾಗುತ್ತೆ, ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ದಲಿತರನ್ನು ಸಿಎಂ ಆಗಲು ಬಿಡಲ್ಲ, ಅವರಿಗೆ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಸಿಎಂ ಕುರ್ಚಿಗೆ ತರಬೇಕೆಂಬ ಆಸೆ ಹೊಂದಿದ್ದು, ಪ್ರಿಯಾಂಕ್ ಖರ್ಗೆ ಡಿಸಿಎಂ ಆದರೂ ಅಚ್ಚರಿ ಪಡಬೇಕಿಲ್ಲ ಎಂದರು.

ಕಾಂಗ್ರೆಸ್ ಸುಡುವ ಮನೆ, ಒಡೆದ ಮನೆ ಎಂಬುದನ್ನ ನಾನು ಹಲವು ಬಾರಿ ಹೇಳಿದ್ದೇನೆ. ಒಮ್ಮೆ ಕನ್ನಡಿ ಹೊಡೆದರೆ ಮತ್ತೆ ಜೋಡಿಸಲಾಗಲ್ಲ, ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಅಂತರಿಕ ಕಲಹ ಜೋಡಿಸಲಾಗದ್ದು, ಕಾಂಗ್ರೆಸ್ ಹೈಕಮಾಂಡ್ ಸತ್ತೋಗಿದೆ. ನಿಜಕ್ಕೂ ಕಾಂಗ್ರೆಸ್ ಹೈಕಮಾಂಡ್ ಎಲ್ಲಿದೆ. ಬಾಬಾ ಸಾಹೇಬರೇ ಹೇಳಿದಂತೆ ಕಾಂಗ್ರೆಸ್ ಸಂಪೂರ್ಣ ನಾಶದತ್ತ ಸಾಗಿದೆ. ಸಿದ್ದರಾಮಯ್ಯ ಅವರು ಜೆಡಿಎಸ್ ನಿಂದ ಬಂದವರು, ಅವರಿಗೆ ಸಿದ್ದಾಂತ ಎಲ್ಲಿದೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ, ಜನತೆ ಇದನ್ನ ಅರಿತುಕೊಳ್ಳಬೇಕಿದೆ ಎಂದರು.

ಮಾಜಿ ಸಚಿವ ಎನ್‌. ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ಅಧಿಕಾರವಿಲ್ಲ, ಮುಖ್ಯಮಂತ್ರಿ ಪದವಿ ಸಿಗಲ್ಲ, ದಲಿತರಿಗೆ ಕುರ್ಚಿ ಇಲ್ಲ ಎಂಬುದು ಸಾಬೀತಾಗಿದೆ. ದೇಶದಲ್ಲಿ ಬಿಜೆಪಿ ಅಧಿಕಾರ ಇರುವತನಕ ಸಂವಿಧಾನ ಬದಲಾವಣೆ ಎಂಬುದು ಸಾಧ್ಯವಿಲ್ಲದ ಮಾತು, ನಮ್ಮ ಪಕ್ಷದ ಯಾರೋ ಒಬ್ಬರು ತಲೆಕೆಟ್ಟು ಹೇಳಿದ ಮಾತನ್ನೆ ಕಾಂಗ್ರೆಸ್ ನವರು ಜನತೆ ಮುಂದೆ ತಪ್ಪು ತಪ್ಪಾಗಿ ಬಿಂಬಿಸಿ ಅಪಪ್ರಚಾರದಲ್ಲಿ ತೊಡಗಿಸಿಕೊಂಡು ತಪ್ಪು ತಪ್ಪಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಇಂದು ದೇಶಾದ್ಯಂತ ತನ್ನ ಅಸ್ತಿತ್ವ ಕಳೆದುಕೊಂಡಿದೆ, ಈ ಹಿಂದೆ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಇದಾಕಿತ್ತು, ಆದರೆ ಇಂದು ದೇಶಾದ್ಯಂತ ಅಧಿಕಾರ ನಡೆಸಿದ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿಕೊಂಡಿತ್ತು, ದಲಿತರ ಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದಲಿತರಿಗೆ ಅದಿಕಾರ ನೀಡುವ ವಿಚಾರದಲ್ಲಿ ಮೆಧುದೋರಣೆ ತಳೆದಿದೆ, ದಲಿತರನ್ನು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿಯೇ ಬಳಸಿಕೊಳ್ಳುತ್ತಿದೆ, ಇದೆ ಈ ಪಕ್ಷದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಬಿಂಬಿತಗೊಂಡಿದ್ದಾರೆ, ಇದನ್ನ ದೇಶದ ಜನತೆ ಸಹಾ ಒಪ್ಪಿಕೊಂಡಾಗಿದೆ ಎಂದರು.

ಸಂವಿಧಾನ ಬದಲಾವಣೆ ಎಂಬುದು ಶುದ್ದ ಸುಳ್ಳು, ಇದು ಕಾಂಗ್ರೆಸ್ಸಿಗರ ಕಿತಾಪತಿ, ದೇಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳು ಕಳೆದಿದ್ದರೂ ಸಹಾ ಸಂವಿಧಾನದಲ್ಲಿ ಒಂದು ಸಣ್ಣ ಬದಲಾವಣೆ ಸಹಾ ಮಾಡಿಲ್ಲ ಎಂಬ ವಾಸ್ತವ ಸತ್ಯವನ್ನು ಜನತೆ ಅರ್ಥಮಾಡಿಕೊಳ್ಳಬೇಕು, 75 ವರ್ಷಗಳ ಅಧಿಕಾರದಲ್ಲಿ ಕಾಂಗ್ರೆಸ್ ನೂರಾರು ಬಾರಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದ ಎಂಬ ವಾಸ್ತವತೆಯನ್ನು ಎಲ್ಲರೂ ತಿಳಿಯಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ನಿರಂಜನ್ ಕುಮಾರ್. ಮಾಜಿ ಶಾಸಕ ಎಸ್.ಬಾಲರಾಜು, ರಘು ಕೌಟಿಲ್ಯ, ಕೇಂದ್ರ ಬರಪರಿಹಾರ ಮಾಜಿ ಅಧ್ಯಕ್ಷ ರಾಮಚಂದ್ರು, ವಾಕ್ ಮತ್ತು ಶ್ರವಣ ಸಂಸ್ಥೆಯ ಡಾ. ಬಾಬು, ಪರಿಶಿಷ್ಟ ಪಂಗಡ ಕಾರ್ಯದರ್ಶಿ ಜಯಸುಂದರ್, ನೂರೊಂದು ಶೆಟ್ಟಿ, ಕೆ ಕೆ ಮೂರ್ತಿ, ಚಂದ್ರಶೇಖರ್, ಸಿದ್ದಪ್ಪಾಜಿ, ಮದುಚಂದ್ರ, ಚಿಂತು ಪರಮೇಶ್ ಇನ್ನಿತರಿದ್ದರು