ಕೇಂದ್ರ ಸರ್ಕಾರದ ಅಕ್ಕಿ ಪಡೆದು ಅನ್ನಭಾಗ್ಯದ ಹೆಸರಿನ ಸಿದ್ದರಾಮಯ್ಯ ಪ್ರಚಾರ

| Published : Mar 30 2024, 12:52 AM IST

ಕೇಂದ್ರ ಸರ್ಕಾರದ ಅಕ್ಕಿ ಪಡೆದು ಅನ್ನಭಾಗ್ಯದ ಹೆಸರಿನ ಸಿದ್ದರಾಮಯ್ಯ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

10 ಕೆಜಿ ಅಕ್ಕಿ ಉಚಿತ ಕೊಡುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಅಕ್ಕಿ ಪಡೆದು ಅನ್ನಭಾಗ್ಯದ ಹೆಸರಿನ ಮೇಲೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ.

ಕಲಘಟಗಿ:

10 ಕೆಜಿ ಅಕ್ಕಿ ಉಚಿತ ಕೊಡುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಅಕ್ಕಿ ಪಡೆದು ಅನ್ನಭಾಗ್ಯದ ಹೆಸರಿನ ಮೇಲೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ತಾಲೂಕಿನ ಹಿರೇಹೊನ್ನಳ್ಳಿ ಹಾಗೂ ದೇವಿಕೊಪ್ಪದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ಸಚಿವ ಸಂತೋಷ ಲಾಡ್ ಅವರಿಗೆ ಮೋದಿ ಹಾಗೂ ಜೋಶಿ ಅವರನ್ನು ಟೀಕಿಸಿದೆ ಇದ್ದರೆ ನಿಮ್ಮ ಮಂತ್ರಿ ಸ್ಥಾನದಿಂದ ತೆಗೆಯುತ್ತೇವೆ ಎಂದು ಅವರ ಮುಖಂಡರು ಹೇಳಿದ್ದರಿಂದ ಪದೇ ಪದೇ ಟೀಕೆ ಮಾಡುತ್ತಾರೆ. ನಾನು ಸಣ್ಣವನು, ನನ್ನ ಬೈಯಲ್ಲಿ. ಆದರೆ, ಜಗತ್ತೇ ಭಾರತ ಕಡೆ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶ ದುರ್ಬಲ ಸ್ಥಿತಿಯಲ್ಲಿ ಇತ್ತು. ಈಗ ಜಗತ್ತಿನಲ್ಲಿ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ಅವಧಿಯಲ್ಲಿ ಮತ್ತೆ ಜಗತ್ತಿನ ಮಾರನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಈರಣ್ಣ ಜಡಿ, ನಾಗರಾಜ ಛಬ್ಬಿ, ಐ.ಸಿ. ಗೋಕುಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಬಸವರಾಜ ಕರಡಿಕೊಪ್ಪ, ನಿಜಗುಣಿ ಕೆಲಗೇರಿ, ಫಕೀರೇಶ ನೆಸ್ರೆಕರ, ಶಶಿಧರ ನಿಂಬಣ್ಣವರ, ವಿಜಯಲಕ್ಷ್ಮಿ ಆಡಿನವರ, ಸದಾನಂದ ಚಿಂತಾಮಣಿ, ಗೀತಾ ಮರಲಿಂಗನವರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪ್ಥಿತರಿದ್ದರು.