ಸಾರಾಂಶ
ಮಸ್ಕಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ಸಮಾವೇಶದಲ್ಲಿ ದಲಿತ ಹೋರಾಟಗಾರ ಡಾ:ಭಾಸ್ಕರ್ ಪ್ರಸಾದ್ ಮಾತನಾಡಿದರು. ಜನ.
ಕನ್ನಡಪ್ರಭ ವಾರ್ತೆ ಮಸ್ಕಿ
ಸಿದ್ದರಾಮಯ್ಯನವರೇ ಒಳಮೀಸಲಾತಿ ಜಾರಿ ಮಾಡಿ, ವಚನ ಭ್ರಷ್ಟರಾಗಬೇಡಿ ಎಂದು ದಲಿತ ಹೋರಾಟಗಾರ ಡಾ.ಭಾಸ್ಕರ್ ಪ್ರಸಾದ್ ಆಗ್ರಹಿಸಿದರು.ಪಟ್ಟಣದಲ್ಲಿ ಒಳ ಮೀಸಲಾತಿ ಜರಿಗಾಗಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಒಳ ಮೀಸಲಾತಿ ಜಾರಿಯಾಗಲು ತಡೆದಿದ್ದೆ ಸಮಾಜದ ರಾಜಕಾರಣಿಗಳು. ನಮ್ಮ ಬೆನ್ನಿಗೆ ಚೂರಿ ಹಾಕಿ ಚುಚ್ಚುತಿರುವುದೇ ನಮ್ಮ ಅಣ್ಣ ತಮ್ಮಂದಿರು ಎಂದರು.ಒಳ ಮೀಸಲಾತಿಗಾಗಿ ನಾವು ಸರ್ಕಾರವನ್ನು ಕೇಳುತ್ತಿದ್ದೇವೆ, ನಮಗೆ ಕೊಡಬೇಕಾಗಿರುವುದನ್ನು ಕೊಡಿ, ವಚನ ಭ್ರಷ್ಟರಾಗಬೇಡಿ. ಸುಪ್ರೀಂ ಕೋರ್ಟ್ ಜಡ್ಜಮೆಂಟ್ ಓದಲು ನಿಮಗೆ ಆಗುವುದಿಲ್ಲವೇ ಎಂದು ಪ್ರಶ್ನಸಿದರು. ಒಳಮೀಸಲಾತಿ ಜಾರಿ ಮಾಡುವವರೆಗೆ ಸಿಎಂ ಸಿದ್ದರಾಮಯ್ಯನವರು ಹೋದಲೇಲ್ಲಾ ಕಪ್ಪು ಪಟ್ಟಿ ಪ್ರದರ್ಶಿಸಬೇಕಾಗುತ್ತದೆ ಎಂದರು.
ಅ.2ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಪಕ್ಷಗಳಿಗೆ ರಾಜೀನಾಮೆ ಕೊಟ್ಟು ಬನ್ನಿ ನಂತರ ತಾನೇ ಒಳ ಮೀಸಲಾತಿ ಜಾರಿ ಆಗುತ್ತೆ ಎಂದರು. ಇದು ರಾಯಚೂರು ಜಿಲ್ಲೆಯ ಅಂಬಣ್ಣ ಅರೋಲಿಕರ್ ಅವರಿಂದ ಆರಂಭವಾಗಲಿ ಆಗ ನಮ್ಮ ಶಕ್ತಿ ಎನೆಂದು ಸರ್ಕಾರಗಳಿಗೆ ತಿಳಿಯುತ್ತದೆ ಎಂದರು.
ಬೃಹತ್ ರ್‍ಯಾಲಿ
ಮಸ್ಕಿ ಪಟ್ಟಣದ ಡಾ.ಅಂಬೇಡ್ಕರ್ ಉದ್ಯಾನದಿಂದ ಒಳ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರ್‍ಯಾಲಿ ನಡೆಯಿತು. ರ್‍ಯಾಲ್ಲಿ ಮಹಿಳೆಯರು ಹಾಗೂ ರಾಜ್ಯದ ವಿವಿಧ ಮುಖಂಡರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ರ್‍ಯಾಲಿಯಲ್ಲಿ ಸಾಂಸ್ಕೃತಿಕ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆ ಉದ್ದಕ್ಕೂ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಲಾಯಿತು. ಸಿಪಿಐ ಬಾಲಚಂದ್ರ ಲಕ್ಕಂ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಲಲಾಗಿತ್ತು.