ಜಾತಿ ಗಣತಿ ಬಗ್ಗೆ ಸಿದ್ದರಾಮಯ್ಯ ಹಲವು ವರ್ಷಗಳಿಂದಲೂ ಹೇಳ್ತಿದ್ದಾರೆ

| Published : Oct 08 2024, 01:07 AM IST

ಸಾರಾಂಶ

ಜಾತಿ ಗಣತಿ ಬಗ್ಗೆ ಸಿದ್ದರಾಮಯ್ಯ ಹೇಳುತ್ತಿರುವುದು ಈಗಲ್ಲ. ಹಲವಾರು ವರ್ಷಗಳಿಂದ ಹೇಳುತ್ತಿದ್ದಾರೆ. ಜೊತೆಗೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಸಹ ಹೇಳಿದ್ದಾರೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪ್ರಮುಖ ಮಸೀದಿಗಳಿಗೆ ಡೆಡ್ ಬಾಡಿ ಫ್ರೀಜರ್ ವಿತರಿಸಿ ವಸತಿ, ವಕ್ಫ್‌ ಸಚಿವ ಜಮೀರ್‌ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿ ಗಣತಿ ಬಗ್ಗೆ ಸಿದ್ದರಾಮಯ್ಯ ಹೇಳುತ್ತಿರುವುದು ಈಗಲ್ಲ. ಹಲವಾರು ವರ್ಷಗಳಿಂದ ಹೇಳುತ್ತಿದ್ದಾರೆ. ಜೊತೆಗೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಸಹ ಹೇಳಿದ್ದಾರೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ನಗರದ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ವಸತಿ ನಿಲಯದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ವತಿಯಿಂದ ಏರ್ಪಡಿಸಿದ್ದ ಮಹಿಳಾ ಕಾಲೇಜು ಮಂಜೂರಾತಿ, ಉಚಿತ ಆಂಬ್ಯುಲೆನ್ಸ್ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕಿನ ಪ್ರಮುಖ ಮಸೀದಿಗಳಿಗೆ ತಲಾ 1ರಂತೆ ಡೆಡ್ ಬಾಡಿ ಫ್ರೀಜರ್ ವಿತರಿಸಿ, ಅವರು ಮಾತನಾಡಿದರು.

ನಮ್ಮದು ಕಾಂಗ್ರೆಸ್ ಪಕ್ಷ. ನಮ್ಮ ವರಿಷ್ಠರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ. ಅವರು ಹೇಳಿದ್ರೆ ಮುಗಿಯಿತು, ನಾವು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ಜಾತಿಗಣತಿ ಜಾರಿ ಬಗ್ಗೆ ರಾಹುಲ್ ಗಾಂಧಿಯೇ ಹೇಳಿದ್ದಾರೆ. ಅದೇ ಅಂತಿಮ. ಜಾತಿ ಗಣತಿ ಜಾರಿಗೆ ಆಗುತ್ತದೆ ಎಂದು ಸ್ಪಷ್ಟಪಡಿಸಿದ ಜಮೀರ್ ಅಹ್ಮದ್, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಮಹಿಳಾ ಕಾಲೇಜು ಮಂಜೂರಾತಿ ಆಗಿದೆ. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಬಲ್ಕೀಶ್‌ ಬಾನು, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ. ಕೆ.ಅನ್ವರ್ ಭಾಷಾ, ಚಿತ್ರದುರ್ಗ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಪಾಷ, ರಾಜ್ಯ ವಕ್ಫ್ ಪರಿಷತ್ತು ಸದಸ್ಯ ಅಬ್ದುಲ್ ಘನಿ ತಾಹಿರ್, ವಕ್ಫ್ ನಿರೀಕ್ಷಕ ಸೈಯದ್ ಜಾಕೀರ್ ಹುಸೇನ್, ಮಸೀದಿಗಳ ಮುತವಲ್ಲಿಗಳು, ಮುಸ್ಲಿಂ ಮುಖಂಡರು ಹಾಗೂ ಸಮಾಜದವರು ಉಪಸ್ಥಿತರಿದ್ದರು.

- - -

ಬಾಕ್ಸ್‌

* ಸಿಎಂ ಕುರ್ಚಿಯಲ್ಲಿ ಟಗರು ಗಟ್ಟಿಯಾಗಿ ಕುಳಿತಿದೆ ಸಿಎಂ ಕುರ್ಚಿಯಲ್ಲಿ ಟಗರು (ಸಿದ್ದರಾಮಯ್ಯ) ಗಟ್ಟಿಯಾಗಿ ಕುಳಿತಿದೆ. ಟಗರನ್ನ ಅಲ್ಲಾಡಿಸಲು ಯಾರಿಂದಲು ಸಾದ್ಯವಿಲ್ಲ. ದಲಿತರಿಗೆ, ಮುಸ್ಲಿಂ ಒಕ್ಕಲಿಗ ಎಲ್ಲ ಜಾತಿಯವರಿಗೆ ಸಿಎಂ ಆಗಬೇಕು ಎಂಬ ಆಸೆ ಇದೆ. ಆದ್ರೆ ಈ ಐದು ವರ್ಷದ ಅವಧಿ ಸಿಎಂ ಹುದ್ದೆ ಖಾಲಿ ಇಲ್ಲಾ. ಸಿಎಂ ಹುದ್ದೆಯಿಂದ ಟಗರನ್ನ ಅಲ್ಲಾಡಿಸಲು ಸಾಧ್ಯವೇ ಇಲ್ಲ ಎಂದು ಸಚಿವ ಜಮೀರ್‌ ಹೇಳಿದರು.

ಈ ವಿಚಾರದ ಬಗ್ಗೆ ಮಾಜಿ ಸಚಿವ ಡಿಕೆ ಸುರೇಶ್ ಸಹ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಎಂದು. ಹೀಗಾಗಿ ಬೇರೆ ಸಿಎಂ ಬಗ್ಗೆ ಮಾತೆ ಇಲ್ಲ. ದೇಶದಲ್ಲಿ ಸಿದ್ದರಾಮಯ್ಯ ಅವರಷ್ಟು ಜನಪ್ರಿಯ ವ್ಯಕ್ತಿ ಯಾರು ಇಲ್ಲ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತಲೂ ಪ್ರಸಿದ್ಧಿ ಸಿದ್ದರಾಮಯ್ಯ. ಬೇಕಾದ್ರೆ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ಕಾರ್ಯಕ್ರಮ ಮಾಡಿ. ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಜನ ಹೆಚ್ಚು ಸೇರುವುದು. ಸ್ವಯಂಪ್ರೇರಿತವಾಗಿ ಜನ ಸೇರುತ್ತಾರೆ ಸಿದ್ದರಾಮಯ್ಯ ಸಲುವಾಗಿ. ನಮ್ಮ ಟಗರು ಟಗರೇ. ಮುಡಾ ವಿಚಾರದ ಬಗ್ಗೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರೇ ಹೇಳಿದ್ದಾರೆ. ಅವರು ಮುಡಾ ಸದಸ್ಯರು ಇದ್ದಾರೆ ಎಂದು ಜಮೀರ್ ಅಹ್ಮದ್ ಹೇಳಿದರು.

- - - - 6kdvg001_958.jpg:

ದಾವಣಗೆರೆಯಲ್ಲಿ ಭಾನುವಾರ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಪ್ರಮುಖ ಮಸೀದಿಗಳಿಗೆ ಡೆಡ್ ಬಾಡಿ ಫ್ರೀಜರ್‌ ವಿತರಿಸಿದರು.