ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೆಂದಿಗೂ ಮರೆಯಲಾಗದ ನಾಯಕರು, ಸೋಲಿನಿಂದ ಕಂಗೆಟ್ಟಿದ್ದ ನನ್ನನ್ನು ಬರಮಾಡಿಕೊಂಡು ಗೌರವಯುತವಾಗಿ ನಡೆಸಿಕೊಂಡರು. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತೆ ನಾನು 57 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕನಸಲ್ಲೂ ನೆನೆಸಿರಲಿಲ್ಲ ಎಂದು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೆಂದಿಗೂ ಮರೆಯಲಾಗದ ನಾಯಕರು, ಸೋಲಿನಿಂದ ಕಂಗೆಟ್ಟಿದ್ದ ನನ್ನನ್ನು ಬರಮಾಡಿಕೊಂಡು ಗೌರವಯುತವಾಗಿ ನಡೆಸಿಕೊಂಡರು. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತೆ ನಾನು 57 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕನಸಲ್ಲೂ ನೆನೆಸಿರಲಿಲ್ಲ ಎಂದು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಹೇಳಿದರು.ತಾಲೂಕಿನ ಸಿದ್ದಯ್ಯನಪುರ ಸೇರಿದಂತೆ ಹಲವೆಡೆ ಕುರುಬ ಸಮಾಜ ವಾಸವಿರುವ ಬಡಾವಣೆಗಳಲ್ಲಿ ಕೋಟ್ಯಂತರ ರು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಸಿದ್ದರಾಮಯ್ಯ ಸರ್ವರಿಗೂ ನಾಯಕರು, ಎಲ್ಲಾ ವರ್ಗದ ಎಲ್ಲಾ ಧರ್ಮಗಳಿಗೂ ನಾಯಕರು, ಅವರಿಗೆ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಸಂಪುಟದ ಸಚಿವರು, ಹೈಕಮಾಂಡ್ ನಾಯಕರು ಎಲ್ಲರೂ ಗೌರವದಿಂದ ಕಾಣುವ ಧೀಮಂತ ನಾಯಕರು. ನಾನು ಸಿದ್ದರಾಮಯ್ಯ ಅವರನ್ನು ಎಂದಿಗೂ ಮರೆಯಲ್ಲ, ಅವರೊಬ್ಬ ಮರೆಯಲಾಗದ ನಾಯಕರು. 19 ವರ್ಷಗಳ ಸೋಲಿನಿಂದ ಕಂಗಾಲಾಗಿದ್ದ ನನ್ನನ್ನು ಬರಮಾಡಿಕೊಂಡು ಗೌರವದಿಂದ ನಡೆಸಿಕೊಂಡರು ಎಂದರು.
ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರವಾಗಿದ್ದು ಉತ್ತಮ ರೀತಿ ಅಧಿಕಾರ ನಡೆಸುತ್ತಿದೆ. ನಾನು ಅತ್ಯಧಿಕಮತದಿಂದ ಗೆಲ್ಲಲು ಸಹಕಾರ ನೀಡಿದ ಮತದಾರರನ್ನುಮರೆಯಲ್ಲ, ಅವರಿಗೆ ಗೌರವ ತರುವನಿಟ್ಟಿನಲ್ಲಿ ನಡೆದುಕೊಂಡಿದ್ದೆನೆ, ಮುಂದಿನ ದಿನಗಳಲ್ಲೂ ಸಹಾ ನಾನು ಮತದಾರರ ಗೌರವಕ್ಕೆ ಚ್ಯುತಿ ಬರದಂತೆ ಬದ್ದತೆಯಿಂದ ನಡೆದುಕೊಳ್ಳುವೆ ಎಂದರು.ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ.ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರನ್ನು ಎಂದೆಂದಿಗೂ ಸ್ಮರಿಸುವ ಕೆಲಸ ಮಾಡುತ್ತೇನೆ. ಅಂತಹ ನಾಯಕರನ್ನು ಅಗತ್ಯಗನುಗುಣವಾಗಿ ಟೀಕಿಸುವ ಅಥವಾ ಅವಶ್ಯವಿದ್ದಾಗ ಮಾತ್ರ ಹೊಗಳುವ ಕೆಲಸ ಎಂದಿಗೂ ಮಾಡಿಲ್ಲ. ಆದರೆ ಅವರು ಅಭಿವೃದ್ದಿ ವಿಚಾರದಲ್ಲಿ ನೀಡಿದ ಸಹಕಾರವನ್ನು ಸದಾ ಸ್ಮರಿಸುವೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಬಳಿಕ ಉದ್ಘಾಟಿಸಿದಂತೆ ಶಾದಿ ಮಹಲ್ ಕಾಮಗಾರಿ ಪೂರ್ಣಗೊಳಿಸಿ ಅದನ್ನು ಲೋಕಾರ್ಪಣೆ ಮಾಡುವ ನಿಟ್ಟಿನಲ್ಲಿ ನಾನು ಕಟಿಬದ್ದವಾಗಿರುವೆ. ರೇಷ್ಮೆ ಬೇಳೆಗಾರರಿಗೆ ಸಿಲ್ಕ್ ಪಾರ್ಕ್ ನಿರ್ಮಾಣ ಗುರಿ ಹೊಂದಿದ್ದೇನೆ. ಆದ್ಯತೆ ಮೇರೆಗೆ ಕನಕ ಭವನ ಸೇರಿದಂತೆ ಎಲ್ಲಾ ವರ್ಗಗಳ ಸಮುದಾಯ ಭವನಗಳಿಗೂ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವೆ. ನಾನು ಶಾಸಕನಾದ ಬಳಿಕ ಅನುದಾನ ದೊರಕದೆ ಸರ್ಕಾರದಿಂದಮಂಜೂರಾತಿ ದೊರಕದೆ ಯಾವುದೇ ಕಾಮಗಾರಿಗಳ ಚಾಲನೆಗೂ ಮುಂದಾಗಿಲ್ಲ, ಪ್ರಚಾರಕ್ಕಾಗಿ ಕೆಲಸ ಮಾಡುತ್ತಿಲ್ಲ, ನನ್ನ ಅಭಿವೃದ್ದಿ ಬಗ್ಗೆ ನನಗೆ ಆತ್ಮ ತೃಪ್ತಿ ಇದೆ ಎಂದರು.ಕೆಲವರು ನನ್ನ ಟೀಕಿಸಬಹುದು. ಆದರೆ ಅಂತಹ ಟೀಕಾಕಾರರಿಗೂ ನಾನು ಕೈಗೊಂಡ ಅಭಿವೃದ್ದಿ ಕೆಲಸ ಕಾಣುವಂತಾಗಬೇಕು ಎಂಬ ಸಂಕಲ್ಪ ನನ್ನದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತೋಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾ.ಪಂ ಮಾಜಿ ಸದಸ್ಯರು ನಂಜೇಗೌಡ, ಕುರುಬರ ಸಂಘದ ಉಪಾಧ್ಯಕ್ಷರು ವಿ.ಸಿ.ಬಸವಣ್ಣ, ಕಸಬಾ ಪಿಎಸಿಸಿ ಬ್ಯಾಂಕ್ ನಿರ್ದೇಶಕರು ಮುಳ್ಳೂರು ಮಂಜುನಾಥ್, ನಗರಸಭೆ ಮಾಜಿ ಸದಸ್ಯರು ಮಂಜುನಾಥ್, ಅನ್ಸರ್ ಬೇಗ್, ಮುಖಂಡರು ಚೇತನ್, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ಪ್ರಕಾಶ್, ಬಸ್ತಿಪುರ ಶಾಂತು, ಪರಶಿವ ಇತರರು ಹಾಜರಿದ್ದರು.