ಸಿದ್ದರಾಮಯ್ಯ ಜನಪರ ಆಡಳಿತದ ಧೀಮಂತ ನಾಯಕ-ಬೈರತಿ ಸುರೇಶ

| Published : Nov 08 2024, 12:32 AM IST

ಸಿದ್ದರಾಮಯ್ಯ ಜನಪರ ಆಡಳಿತದ ಧೀಮಂತ ನಾಯಕ-ಬೈರತಿ ಸುರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪಷ್ಟ ಹಾಗೂ ಜನಪರ ಆಡಳಿತವನ್ನು ರಾಜ್ಯದಲ್ಲಿ ಆಳ್ವಿಕೆ ಮಾಡಿದ ಧೀಮಂತ ನಾಯಕ, ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.

ಸವಣೂರು: ಸ್ಪಷ್ಟ ಹಾಗೂ ಜನಪರ ಆಡಳಿತವನ್ನು ರಾಜ್ಯದಲ್ಲಿ ಆಳ್ವಿಕೆ ಮಾಡಿದ ಧೀಮಂತ ನಾಯಕ, ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.ತಾಲೂಕಿನ ಮಂತ್ರವಾಡಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಅಭ್ಯರ್ಥಿ ಯಾಸೀರಖಾನ ಪಠಾಣ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಡವರು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಭಿಕ್ಷೆ ಬೇಡಿ ತಿನ್ನುವುದನ್ನು ಅರಿತುಕೊಂಡು ಇನ್ನೂ ಮುಂದೆ ಯಾರು ಹಸಿವಿನಿಂದ ಬಳಲಬಾರದು ಎಂದು ಸುಮಾರು ೧೦ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ರಾಜ್ಯದಲ್ಲಿಯೆ ಮಾದರಿಯಾಗಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಇಂತಹ ಸರಳ ದಿಟ್ಟ ನಾಯಕನಿಗೆ ಮುಡಾ ಹಗರಣ ಎಂಬ ಹಣೆಪಟ್ಟ ಕಟ್ಟಲು ಬಿಜೆಪಿದವರು ಹೊರಟಿದ್ದಾರೆ. ಆದರೆ ಇದು ಯಾವುದೂ ರಾಜ್ಯದಲ್ಲಿ ನಡೆಯಲ್ಲ. ಸುಮಾರು ೪೦ ವರ್ಷದ ರಾಜಕೀಯ ಅನುಭವದಲ್ಲಿ ಎಲ್ಲಿಯೂ ಒಂದು ಕಪ್ಪುಚುಕ್ಕಿ ಇಲ್ಲದೇ ರಾಜಕೀಯ ಮಾಡಿದ್ದಾರೆ. ಇನ್ನೂ ಮೂರು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಹಾಗೂ ಈ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ತತ್ವ-ಸಿದ್ಧಾಂತ ನಂಬಿ ಸಚಿವ ಬೈರತಿ ಸುರೇಶ ಅವರ ಸಮ್ಮುಖದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಯುವಕರು ಪಕ್ಷ ಸೇರ್ಪಡೆಗೊಂಡರು.ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ವಿನೋದ ಅಸೂಟಿ, ದೀಪ್ತಿ, ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಚಿಕ್ಕಣ ಹಾದಿಮನಿ, ಕುರುಬ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸಲಿಂಗಪ್ಪ ಬಸಲಗುಂದಿ, ಯಲ್ಲಪ್ಪ ಆಡಿನವರ, ದೂಳಪ್ಪ ಕುರಿಗಾರ, ಅಬ್ದುಲ್ ಸತ್ತಾರ ಅರಳೇಶ್ವರ, ಗುಡ್ಡಪ್ಪ ಜಲದಿ, ಮುಖಂಡರಾದ ಅಶೋಕ ನೆಲ್ಲೂರ, ತಿಪ್ಪಣ್ಣ ಪೂಜಾರ, ನಾಗಪ್ಪ ಬಾರ್ಕಿ, ಮಾದೇವಪ್ಪ ಕುರಿಗಾರ, ಫಕ್ಕೀರೇಶ ನೆಲ್ಲೂರ, ಹಜರೇಸಾಬ ಕೆಂಗಾಪುರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.