ಸಿದ್ದರಾಮಯ್ಯ ಶ್ರೀರಾಮ ಘೋಷಣೆ ಕೂಗಲು ಬಿಜೆಪಿ ಕಾರಣ: ರವಿಕುಮಾರ

| Published : Feb 27 2024, 01:37 AM IST

ಸಿದ್ದರಾಮಯ್ಯ ಶ್ರೀರಾಮ ಘೋಷಣೆ ಕೂಗಲು ಬಿಜೆಪಿ ಕಾರಣ: ರವಿಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಿಂದಾಗಿ ಕಾಶ್ಮೀರದಲ್ಲಿ ರಾಜಾರೋಷವಾಗಿ ಓಡಾಡುವಂತಾಗಿದೆ

ಕೂಡ್ಲಿಗಿ: ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅದಕ್ಕೆ ಕಾರಣ ಬಿಜೆಪಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಸಮರ್ಥಿಸಿಕೊಂಡರು.

ತಾಲೂಕಿನ ಹೊಸಹಳ್ಳಿಯಲ್ಲಿ ಬಿಜೆಪಿಯ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಿಂದಾಗಿ ಕಾಶ್ಮೀರದಲ್ಲಿ ರಾಜಾರೋಷವಾಗಿ ಓಡಾಡುವಂತಾಗಿದೆ ಎಂದರು.

ದೇಶಾದ್ಯಂತ 500ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ಹೆದ್ದಾರಿ ಯೋಜನೆ ಸೇರಿದಂತೆ ಗ್ಯಾಸ್ ಸೌಲಭ್ಯ ಹಾಗೂ ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ರೈತರ ಖಾತೆಗೆ ನೇರವಾಗಿ ₹6000 ಜಮೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ. ರಾಜು ಬಣವಿಕಲ್ಲು, ಮಾಜಿ‌ ಶಾಸಕ ಅಮರನಾಥ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ರೇವಣ್ಣ, ಮಹಿಳಾ ಮಂಡಲ ಅಧ್ಯಕ್ಷೆ ಶಾರದಾ ಕುಂಬಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಮಲ್ಲಿಕಾರ್ಜುನ, ಶಿಲ್ಪಾ ಬಸವರಾಜ್, ಗೀತಾ, ಸಣ್ಣಬಾಲಪ್ಪ, ಬೆಳ್ಳಕಟ್ಟೆ ಕಲ್ಲೇಶಪ್ಪ, ಹಾರಕಭಾವಿ ಕೊಟ್ರೇಶ್, ಆಲೂರು ಕೆ.ಟಿ. ಮಲ್ಲಿಕಾರ್ಜುನ, ಜಯರಾಜ್ ಅಮಲಾಪುರ ಸುದರ್ಶನ ಇತರರಿದ್ದರು.