ಸಾರಾಂಶ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2024-25ನೇ ಸಾಲಿನ ಆಯವ್ಯಯದಲ್ಲಿ ಬರೋಬ್ಬರಿ ಆರು ಪುಟಗಳಷ್ಟು ಕೇಂದ್ರ ಸರ್ಕಾರದಿಂದ ಆಗಿರುವ ಆರ್ಥಿಕ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದು, ಅಂಕಿ-ಅಂಶಗಳ ಸಹಿತ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ಹರಿಹಾಯ್ದರು.ಜಿಎಸ್ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ 59,274 ಕೋಟಿ ರು. ನಷ್ಟ ಉಂಟಾಗಿದೆ. ಜತೆಗೆ 14ನೇ ಹಣಕಾಸು ಆಯೋಗದ ಶಿಫಾರಸ್ಸಿನಡಿ 2.77 ಲಕ್ಷ ಕೋಟಿ ರು. ತೆರಿಗೆ ಪಾಲು ಬರಬೇಕಿತ್ತು.ಆದರೆ 15ನೇ ಹಣಕಾಸು ಅಯೋಗದ ಶಿಫಾರಸ್ಸಿನಲ್ಲಿ ಮಾಡಿರುವ ಅನ್ಯಾಯದಿಂದ ರಾಜ್ಯಕ್ಕೆ 2.15 ಲಕ್ಷ ಕೋಟಿ ರು. ಮಾತ್ರ ಹಂಚಿಕೆಯಾಗಿದೆ. ತನ್ಮೂಲಕ 62,098 ಕೋಟಿ ರು. ನಷ್ಟವಾಗಿದೆ.ಇದಲ್ಲದೆ 15ನೇ ಹಣಕಾಸು ಆಯೋಗವು ಮೊದಲ ವರದಿಯಲ್ಲಿ 2020-21ನೇ ವರ್ಷಕ್ಕೆ 5,495 ಕೋಟಿ ರು. ವಿಶೇಷ ಅನುದಾನವನ್ನು ಕರ್ನಾಟಕ ರಾಜ್ಯಕ್ಕೆ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರು. ಅನುದಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸುಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.ರಾಜ್ಯದಲ್ಲಿ ಡಬಲ್ ಎಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರ ಇದ್ದರೂ ಸಹ ಕೇಂದ್ರದಿಂದ ಒಟ್ಟು 11,495 ಕೋಟಿ ರು. ವಿಶೇಷ ಅನುದಾನ ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಜತೆಗೆ 2017-18 ರಿಂದ 2023-24ರವರೆಗಿನ ಅವಧಿಯಲ್ಲಿ ಸೆಸ್ ಹಾಗೂ ಸರ್‌ಚಾರ್ಜ್ ಸಂಗ್ರಹ ಶೇ.153 ರಷ್ಟು ಹೆಚ್ಚಾಗಿದೆ. ಇದರಲ್ಲಿ ಒಟ್ಟು 11,34,301 ಕೋಟಿ ರು. ರಾಜ್ಯಗಳಿಗೆ ಹಂಚಿಕೆಯಾಗಬೇಕಿತ್ತು. ಆದರೆ ಹಂಚಿಕೆಯಾಗದ ಕಾರಣ ಕಳೆದ ಏಳು ವರ್ಷಗಳ ಅವಧಿಯಲ್ಲಿ 45,322 ಕೋಟಿ ರು. ನಷ್ಟ ಉಂಟಾಗಿದೆ.ಬಿಜೆಪಿಯ ರಾಜ್ಯಗಳಿಗೂ ಈ ಬಗ್ಗೆ ಅಸಮಾಧಾನವಿದ್ದರೂ ದನಿ ಎತ್ತುತ್ತಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ದಜನಿಯೆತ್ತಿ ರಾಜ್ಯಗಳ ಹಕ್ಕಿನ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಸಿದ್ದರಾಮಯ್ಯ ದನಿಯೆತ್ತಿದ್ದಾರೆ.
16 ಹಣಕಾಸು ಆಯೋಗದಲ್ಲಿ ಅನ್ಯಾಯ ಆಗದಂತೆ ಎಚ್ಚರ:15ನೇ ಹಣಕಾಸು ಆಯೋಗಕ್ಕೆ ಸರಿಯಾದ ವಿಶ್ಲೇಷಣೆಯೊಂದಿಗೆ ಜ್ಞಾಪನಾ ಪತ್ರದ ಮೂಲಕ ಹಕ್ಕೊತ್ತಾಯ ಮಂಡಿಸಿದ್ದರೂ ರಾಜ್ಯಕ್ಕೆ ನ್ಯಾಯ ಸಿಕ್ಕಿರುವುದಿಲ್ಲ. ಈ ಅನ್ಯಾಯ ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸಚಿವ ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕ ಕೋಶ ರಚಿಸಲಾಗಿದೆ. ಇದರಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಮತ್ತು ಅನುದಾನಗಳನ್ನು ಪಡೆಯಲು ಒಂದು ಜ್ಞಾಪನಾ ಪತ್ರವನ್ನು ಸಿದ್ಧಪಡಿಸಿ ಸರ್ಥಮವಾಗಿವೈಜ್ಞಾನಿಕವಾಗಿ ವಿಶ್ಲೇಷಿಸಿದ ಅಂಕಿ-ಅಂಶಗಳೊಂದಿಗೆ 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧಿಸಲಾಗಿದೆ ಎಂದು ಬಜೆಟ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.5 ತಿಂಗಳಿಂದ ನಯಾಪೈಸೆ ಪರಿಹಾರ ಬಂದಿಲ್ಲರಾಜ್ಯದಲ್ಲಿ ತೀವ್ರ ಬರದಿಂದಾಗಿ ಜನರು ತತ್ತರಿಸಿದ್ದಾರೆ. 38 ಸಾವಿರ ಕೋಟಿ ರು. ಬೆಳೆ ಹಾನಿ ಉಂಟಾಗಿರುವುದರಿಂದ ಎನ್‌ಡಿಆರ್‌ಎಫ್ ನಿಯಮಗಳ ಅಡಿ 17,800 ಕೋಟಿ ರು. ನಷ್ಟ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಐದು ತಿಂಗಳಾದರೂ ನಯಾಪೈಸೆ ಪರಿಹಾರ ಬಂದಿಲ್ಲ ಎಂದೂ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.