ಸಿದ್ಧರಾಮೇಶ್ವರರು ಸಮಾಜದಲ್ಲಿ ಅಪಾರ ಬದಲಾವಣೆ ತಂದಿದ್ದಾರೆ. ಅವರ ಮಾರ್ಗದರ್ಶನವು ನಮ್ಮ ಭವಿಷ್ಯಕ್ಕೆ ದಾರಿಯನ್ನಾಗಿ ಮಾಡಿಕೊಳ್ಳಬೇಕು.

ಧಾರವಾಡ:

ಶಿವಯೋಗಿ ಶ್ರೀಸಿದ್ಧರಾಮೇಶ್ವರರ ಜೀವನವು ನಮಗೆ ಪ್ರೇರಣೆದಾಯಕ. ಸಮಾಜಕ್ಕೆ ಧರ್ಮ, ಸೇವೆ ಮತ್ತು ಶ್ರದ್ಧೆಯ ತತ್ವಗಳನ್ನು ಅರ್ಥಮಾಡಿಸಿದರು ಅವರೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿದ ಅವರು, ನಾವು ಅವರ ಸಾಧನೆಗಳನ್ನು ಸ್ಮರಿಸಿ, ಗೌರವಿಸುವ ಮೂಲಕ ನಮ್ಮ ಕಾರ್ಯಗಳನ್ನು ಉತ್ತಮಗೊಳಿಸಬೇಕು. ಸಿದ್ಧರಾಮೇಶ್ವರರು ಸಮಾಜದಲ್ಲಿ ಅಪಾರ ಬದಲಾವಣೆ ತಂದಿದ್ದಾರೆ. ಅವರ ಮಾರ್ಗದರ್ಶನವು ನಮ್ಮ ಭವಿಷ್ಯಕ್ಕೆ ದಾರಿಯನ್ನಾಗಿ ಮಾಡಿಕೊಳ್ಳಬೇಕು ಎಂದರು.

ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿ, ಸಿದ್ಧರಾಮೇಶ್ವರರ ಅವರ ಜೀವನ ಮತ್ತು ಬೋಧನೆಗಳು ನಮಗೆ ಉತ್ತಮ ಭವಿಷ್ಯದ ಮಾರ್ಗದರ್ಶನ ನೀಡುತ್ತಿವೆ. ಅವರು ತಮ್ಮ ಜೀವನದಲ್ಲಿ ಧರ್ಮ, ಶ್ರದ್ಧೆ ಮತ್ತು ಸೇವೆಯ ಮಹತ್ವವನ್ನು ಪ್ರತಿಪಾದಿಸಿ, ಸಮುದಾಯವನ್ನು ಪ್ರೇರೇಪಿಸಿದ್ದಾರೆ ಎಂದು ಹೇಳಿದರು. ಸಮಾಜದ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ನ್ಯಾಯ, ಗೌರವ ಮತ್ತು ಸಹನೆ ತುಂಬಿದ ವ್ಯಕ್ತಿತ್ವ ಮೂಡಿಸುತ್ತದೆ. ಅವರ ಕೊಡುಗೆಗಳು ನಮ್ಮ ಸಂಸ್ಕೃತಿಗೆ ಹೆಮ್ಮೆ ಎಂದರು.

ಹುಡಾ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಸಿದ್ಧರಾಮೇಶ್ವರರ ಜೀವನವು ನಮಗೆ ನಿಷ್ಠೆ, ಧರ್ಮ ಮತ್ತು ಸೇವೆಯ ಮಹತ್ವ ಕಲಿಸಿದೆ. ಅವರು ತಮ್ಮ ಜ್ಞಾನ ಮತ್ತು ಸಾಧನೆಯ ಮೂಲಕ ಸಮಾಜದಲ್ಲಿ ಅಪಾರ ಬದಲಾವಣೆ ತಂದು, ನಮಗೆ ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರವಿ ಶೇಷಗಿರಿ, ಸಿದ್ದರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹುಡಾ ಸದಸ್ಯ ಮಂಜುನಾಥ ಭೋವಿ, ಪಾಲಿಕೆ ಮಾಜಿ ಸದಸ್ಯ ಬಸವರಾಜ ಮುತ್ತಳ್ಳಿ, ಕುಮಾರ ಬೆಕ್ಕೇರಿ, ರವಿ ಕುಲಕರ್ಣಿ, ತುಳಸಪ್ಪ ಪೂಜಾರ ಇದ್ದರು.