ಸಿದ್ದರಾಮೇಶ್ವರರು ಸಮಾಜಮುಖಿ ಕಾರ್ಯ ಕೈಗೊಂಡ ಶ್ರೇಷ್ಠ ಸಂತ: ಶಾಸಕ ಕೋಳಿವಾಡ

| Published : Jan 17 2024, 01:50 AM IST

ಸಿದ್ದರಾಮೇಶ್ವರರು ಸಮಾಜಮುಖಿ ಕಾರ್ಯ ಕೈಗೊಂಡ ಶ್ರೇಷ್ಠ ಸಂತ: ಶಾಸಕ ಕೋಳಿವಾಡ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ಕಾಯಕಯೋಗಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿಯೇ ಸಮಾಜಮುಖಿ ಕಾರ್ಯ ಕೈಗೊಂಡ ಶ್ರೇಷ್ಠ ಸಂತರಾಗಿದ್ದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಿತ್ಯ ಕಾಯಕಯೋಗಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿಯೇ ಸಮಾಜಮುಖಿ ಕಾರ್ಯ ಕೈಗೊಂಡ ಶ್ರೇಷ್ಠ ಸಂತರಾಗಿದ್ದರು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಣಿ-ಪಕ್ಷಿಗಳಿಗೆ, ಅಂತರ್ಜಲ ಶೇಖರಣೆಗೆ ಅಂದಿನ ಕಾಲದಲ್ಲಿ ವೈಜ್ಞಾನಿಕವಾಗಿ ಕೆರೆ,ಕಟ್ಟೆ, ಬಾವಿ, ರಸ್ತೆ, ದೊಡ್ಡ ದೊಡ್ಡ ದೇವಸ್ಥಾನಗಳು, ಗೋಪುರಗಳು, ರಾಜರು ಆಳಿದ ಕೋಟೆ ಕೊತ್ತಲಗಳು, ಮುಂತಾದ ಕಟ್ಟಡ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಭೋವಿ ವಡ್ಡರ ಸಮಾಜ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದು ಅವರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿ ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮಿಸುತ್ತಿದೆ. ನಗರ ಪ್ರದೇಶದಲ್ಲಿ ಭೋವಿ ಸಮಾಜಕ್ಕೆ ನಿವೇಶನ ಮತ್ತು ಸಮುದಾಯ ಭವನವನ್ನು ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರು ಮಾಡಿ ನಾನೇ ಅದನ್ನು ಉದ್ಘಾಟನೆ ಮಾಡುತ್ತೇನೆ ಎಂದರು.

ಮಂಜಣ್ಣ ವಡ್ಡರ, ಪ್ರಭುಸ್ವಾಮಿ ಕರ್ಜಗಿಮಠ, ಹನುಮಂತಪ್ಪ ಕಬ್ಬಾರ, ಎಚ್.ಟಿ. ಅರಳಿಕಟ್ಟಿ, ಶಿವಣ್ಣ ಹೊಸಮನಿ, ಮಂಜುನಾಥ ತಿಮ್ಮಾಪುರ, ರಂಗಪ್ಪ ಕಮದೋಡ, ರವಿ ಮಲ್ಲಳ್ಳಿ. ವೆಂಕಟೇಶ ದೊಡ್ಮನಿ, ಮಂಜುನಾಥ ಕಮದೋಡ, ಗಣೇಶ ಬಂಡಿವಡ್ಡರ. ಹನುಮಂತಪ್ಪ ಹಲಗೇರಿ, ಬಸಣ್ಣ ಹಲಗೇರಿ, ಶರಣಪ್ಪ ಕಜ್ಜರಿ, ದುರ್ಗಪ್ಪ ವಡ್ಡರ, ಹನುಮಂತಪ್ಪ ಚಿಂಚಲಿ ಹಾಗೂ ತಹಸೀಲ್ದಾರ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.