ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿದ ಸಿದ್ದರಾಮೇಶ್ವರರು

| Published : Jan 17 2024, 01:48 AM IST

ಸಾರಾಂಶ

ಪ್ರತಿಯೊಬ್ಬರು ಶರಣರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದರೆ ಸಮಾಜದಲ್ಲಿನ ಸಮಾನತೆ, ಮೂಡನಂಭಿಕೆ, ಅನಾಚಾರಗಳನ್ನು ದೂರವಾಗಿಸಲು ಸಾಧ್ಯ

ಯಲಬುರ್ಗಾ: ಶ್ರೀಶಿವಯೋಗಿ ಸಿದ್ದರಾಮೇಶ್ವರರು 12 ನೇ ಶತಮಾನದಲ್ಲೇ ಜಾತಿ ಭೇದ ಮರೆತು ಇಡಿ ಮಾನವ ಜನಾಂಗದ ಒಳಿತಿಗೆ ಅನೇಕ ಕೆರೆ, ದೇಗುಲಗಳನ್ನು ನಿರ್ಮಿಸುವ ಮೂಲಕ ವಿಶ್ವಮಾನವರಾಗಿದ್ದಾರೆ ಎಂದು ವಜ್ರಬಂಡಿ ಗ್ರಾಪಂ ಮಾಜಿ ಸದಸ್ಯ ಹುಲಗಪ್ಪ ಬಂಡಿವಡ್ಡರ ಹೇಳಿದರು.

ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ವೃತ್ತಕ್ಕೆ ಪ್ರಜೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಶರಣರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಪಾಲಿನೆ ಮಾಡಿದರೆ ಸಮಾಜದಲ್ಲಿನ ಸಮಾನತೆ, ಮೂಡನಂಭಿಕೆ, ಅನಾಚಾರಗಳನ್ನು ದೂರವಾಗಿಸಲು ಸಾಧ್ಯವಾಗುತ್ತದೆ ಎಂದರು.

ಈ ಬೊವಿ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ತೀರಾ ಹಿಂದುಳಿದಿದ್ದು, ಇಂತಹ ಸಮುದಾಯಕ್ಕೆ ಸರ್ಕಾರ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಚಂದವ್ವ ರಾಠೋಡ ಮಾತನಾಡಿ, ವಚನಗಳನ್ನು ರಚಿಸಿ ಸಮಾಜದಲ್ಲಿನ ಮೂಢನಂಬಿಕೆ, ಅಸ್ಪ್ರಶ್ಯತೆ ನಿವಾರಿಸಲು ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನಗಳು ದೊರೆಯುವಂತಾಗಲು ಶ್ರಮಿಸಿದವರಲ್ಲಿ ಅಗ್ರಗಣ್ಯರು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ರಾಮಣ್ಣ ಪೂಜಾರ, ಕನಕಪ್ಪ ಉಪ್ಪಾರ, ಭಾಗ್ಯಶ್ರೀ ತಳವಾರ, ಶರಣಪ್ಪ ಚಿಕ್ಕಗೌಡ್ರ, ಯಲ್ಲಪ್ಪ ಹಳ್ಳಿಗುಡಿ, ಶರಣಪ್ಪ ಉಪ್ಪಾರ, ನೀಲಪ್ಪ, ಶರಣಪ್ಪ ತಳವಾರ, ಹನುಮಪ್ಪ ಶಾಖಾಪೂರ, ಶರಣಪ್ಪ ಹರಿಜನ, ಲಕ್ಷ್ಮಣ ಭಜೇಂತ್ರಿ, ಶಿವಕುಮಾರ ಹೊಸ್ಮಠ, ರೇವಣೆಪ್ಪ ಮ್ಯಾಗೇರಿ, ಮಂಜುನಾಥ, ಮಾರುತಿ ಬಡ್ಡರ್, ಫಕೀರಪ್ಪ, ಮೂಕಪ್ಪ ವಡ್ಡರ್, ದುರಗಪ್ಪ ವಡ್ಡರ್, ಬಸವರಾಜ,ಕೆಂಚಪ್ಪ, ಲಕ್ಷ್ಮಣ ವಡ್ಡರ್,ರಾಹುಲ್ ಸೇರಿದಂತೆ ಮಹಿಳೆಯರು ಇದ್ದರು.