ಸಾರಾಂಶ
ಸಾಮಾಜಿಕ ಮತ್ತು ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಜನಸಾಮಾನ್ಯರಿಗೆ ಪಸರಿಸುವ ಮೂಲಕ ಸಮಗ್ರ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರಲ್ಲಿ ಕಾಯಕಯೋಗಿ ಗುರು ಸಿದ್ದರಾಮೇಶ್ವರರ ಪಾತ್ರ ಪ್ರಮುಖವಾದುದು
ಕನ್ನಡಪ್ರಭ ವಾರ್ತೆ ಹಾನಗಲ್ಲ
ಸಾಮಾಜಿಕ ಮತ್ತು ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಜನಸಾಮಾನ್ಯರಿಗೆ ಪಸರಿಸುವ ಮೂಲಕ ಸಮಗ್ರ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರಲ್ಲಿ ಕಾಯಕಯೋಗಿ ಗುರು ಸಿದ್ದರಾಮೇಶ್ವರರ ಪಾತ್ರ ಪ್ರಮುಖವಾದುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಯಕಯೋಗಿ ಗುರು ಸಿದ್ದರಾಮೇಶ್ವರ ಜಯಂತಿಯಲ್ಲಿ ಭಾಗವಹಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿ ಎಂದೆಲ್ಲಾ ಭಕ್ತ ಸಮೂಹದ ಭಕ್ತಿ, ಗೌರವಗಳಿಗೆ ಪಾತ್ರರಾಗಿರುವ ಗುರು ಸಿದ್ದರಾಮೇಶ್ವರರು ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸಿ ಜನರ ದಾಹ ತೀರಿಸಿದವರು. ಅನ್ನ ದಾಸೋಹದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ದೇವಾಲಯಗಳ ನಿರ್ಮಾಣ, ಬಡವರ ಕಲ್ಯಾಣ, ಸಾಮೂಹಿಕ ವಿವಾಹ, ಸ್ತ್ರೀ ಪುರುಷ ಬೇಧ ಅಳಿಸುವಿಕೆ ಮುಂತಾದ ಸಾಮಾಜಿಕ ಕಾರ್ಯಗಳ ಮೂಲಕ ಮನೆಮಾತಾಗಿದ್ದಾರೆ. ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತವಾಗದ ಗುರು ಸಿದ್ದರಾಮೇಶ್ವರರು ವಚನ ಕ್ರಾಂತಿಯಲ್ಲಿಯೂ ತೊಡಗಿಕೊಳ್ಳುವ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ನಮಗೆಲ್ಲ ಸನ್ಮಾರ್ಗದ ದಾರಿ ತೋರಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ರೇಣುಕಾ, ಮುಖಂಡರಾದ ಆನಂದ ಗಡ್ಡದೇವರಮಠ, ಯಾಸೀರಖಾನ ಪಠಾಣ, ಹನುಮಂತಪ್ಪ ಯಳ್ಳೂರ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ನಾಗರಾಜ ಗಾಜಿಪೂರ, ಫಯಾಜ್ ಲೋಹಾರ, ರಾಜೂ ಗಾಡಿಗೇರ, ಬಿ.ಎಸ್. ಪಾಟೀಲ, ರಾಮೂ ಯಳ್ಳೂರ, ರಾಜೂ ಬಾರ್ಕಿ, ರಾಮಚಂದ್ರ ಕಲ್ಲೇರ, ರಫೀಕ್ ಉಪ್ಪುಣಸಿ, ನಿಂಗಪ್ಪ ಹೊಸೂರ, ರಾಮಣ್ಣ ಕರೆಕ್ಯಾತನಹಳ್ಳಿ, ಮಹದೇವಪ್ಪ ಬಂಡಿವಡ್ಡರ, ಮಹಲಿಂಗಪ್ಪ ಹೊಳಿಯಣ್ಣನವರ, ಕೊಟ್ರಪ್ಪ ಕುದರಿಸಿದ್ದಣ್ಣನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.