ದಾಬಸ್‍ಪೇಟೆ: ಶ್ರೀವನಕಲ್ಲು ಮಠದ 2ನೇ ಮಠಾಧ್ಯಕ್ಷರಾಗಿ ಶ್ರೀ ಸಿದ್ದಯೋಗಾನಂದ ಸ್ವಾಮೀಜಿ ನಡೆದು ಬಂದ ಹಾದಿ ನಮಗೆ ದಾರಿದೀಪ. ಅವರ ಆಡಳಿತದಲ್ಲಿ ಶ್ರೀಮಠದಲ್ಲಿ ಅನಾಥಾಶ್ರಮ, ಧ್ಯಾನ ಮಂದಿರ ನಿರ್ಮಾಣ, ಶಾಲೆ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಡಾ. ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು
ದಾಬಸ್‍ಪೇಟೆ: ಶ್ರೀವನಕಲ್ಲು ಮಠದ 2ನೇ ಮಠಾಧ್ಯಕ್ಷರಾಗಿ ಶ್ರೀ ಸಿದ್ದಯೋಗಾನಂದ ಸ್ವಾಮೀಜಿ ನಡೆದು ಬಂದ ಹಾದಿ ನಮಗೆ ದಾರಿದೀಪ. ಅವರ ಆಡಳಿತದಲ್ಲಿ ಶ್ರೀಮಠದಲ್ಲಿ ಅನಾಥಾಶ್ರಮ, ಧ್ಯಾನ ಮಂದಿರ ನಿರ್ಮಾಣ, ಶಾಲೆ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಡಾ. ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು.
ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದಯೋಗಾನಂದ ಸ್ವಾಮೀಜಿಯ 16ನೇ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮಠಕ್ಕೆ ಒಂದು ಎಕರೆ ಜಮೀನನ್ನು ಖರೀದಿಸಿ ಭದ್ರಬುನಾದಿ ನಿರ್ಮಿಸಿದ್ದಾರೆ. ಅನಾಥಾಶ್ರಮ ಮತ್ತು ವೃದ್ದಾಶ್ರಮ ಎರಡೂ ಅವರ ಎರಡು ಕಣ್ಣಿದ್ದಂತೆ. ಶ್ರೀ ಮಠದಲ್ಲಿ ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೆ ಸರ್ವ ಸಮುದಾಯವನ್ನು ಸೇರಿಸಿಕೊಂಡು ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಅಣತಿಯಂತೆ ಭಕ್ತಾಧಿಗಳ ಸಹಕಾರದಿಂದ ಮಠವನ್ನು ಮುನ್ನಡೆಸುತ್ತಿದ್ದೇವೆ ಎಂದರು.ಮಾಗಡಿಯ ಗುಮ್ಮಸಂದ್ರ ಶ್ರೀ ರುದ್ರಮುನೇಶ್ವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರವನ್ನು ಲಿಂಗೈಕ್ಯ ಸಿದ್ಧಯೋಗಾನಂದ ಶ್ರೀಗಳು ಭಿಕ್ಷಾಟನೆ ಮಾಡಿ ಕಟ್ಟಿದರು. ಪೂಜ್ಯರ ಎಲ್ಲಾ ಕಾರ್ಯಗಳನ್ನು ಈಗಿನ ಮಠಾಧೀಶರಾದ ಬಸವರಮಾನಂದ ಸ್ವಾಮೀಜಿ ಮುನ್ನಡೆಸುತ್ತಿದ್ದಾರೆ. ವನಕಲ್ಲು ಮಠಕ್ಕೆ ದೊಡ್ಡಮಟ್ಟದಲ್ಲಿ ಆಸ್ತಿ, ಇಲ್ಲದಿದ್ದರೂ ಅನಾಥ ಮಕ್ಕಳು, ವಯೋವೃದ್ಧರು ಹಾಗೂ 80ಕ್ಕೂ ಹೆಚ್ಚು ಗೋವುಗಳನ್ನು ಸಾಕುವುದು ಕಷ್ಟದ ಕೆಲಸ, ಸಿದ್ಧಯೋಗಾನಂದ ಶ್ರೀಗಳು ಅನಾಥ ಆಶ್ರಮವನ್ನು ಪ್ರಾರಂಭಿಸಿ, ಜೋಳಿಗೆಯಲ್ಲಿ ಅನ್ನ, ವಾಟರ್ ಕ್ಯಾನಿನಲ್ಲಿ ಸಾಂಬಾರು ತಂದು ಅನಾಥ ಮಕ್ಕಳನ್ನು ಪೋಷಿಸಿದ್ದಾರೆ. ಅವರ ಹಾದಿಯಲ್ಲಿ ಈಗಿನ ಶ್ರೀಗಳು ನಡೆಯುತ್ತಿದ್ದಾರೆ ಎಂದರು.
ಪೋಟೋ 5 :ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದಯೋಗಾನಂದ ಸ್ವಾಮೀಜಿಯವರ 16ನೇ ಸ್ಮರಣೋತ್ಸವಕ್ಕೆ ಡಾ. ಬಸವರಮಾನಂದ ಸ್ವಾಮೀಜಿ ಹಾಗೂ ಭಕ್ತರು ಚಾಲನೆ ನೀಡಿದರು.