ಸಾರಾಂಶ
ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಅವರ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ.
ಹುಬ್ಬಳ್ಳಿ:
ಸಿದ್ದೇಶ್ವರ ಶ್ರೀಗಳು ಸರಳತೆಯ ಸಾಕಾರ ಮೂರ್ತಿಗಳು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆ ವರ್ಣಿಸಲು ಪದಗಳೇ ಇಲ್ಲ ಎಂದು ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಹೇಳಿದರು.ತಾಲೂಕಿನ ವರೂರು ಗ್ರಾಮದಲ್ಲಿರುವ ಜ್ಞಾನಯೋಗಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಗುರುನಮನ ಮಹೋತ್ಸವದೊಳಗೆ ಗ್ರಾಮದಲ್ಲಿ ಸುಸರ್ಜಿತವಾಗಿರುವ ಸಿದ್ದೇಶ್ವರ ಜ್ಞಾನ ಯೋಗಶ್ರಮ ಕಟ್ಟಡ ನಿರ್ಮಾಣವಾಗಲಿ. ಅದಕ್ಕೆ ಬೇಕಾದ ಸಹಾಯ-ಸಹಕಾರದ ಭರವಸೆ ನೀಡಿದರು.ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ.ಕೆ. ನಾಯ್ಕರ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಅವರ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಈ ವೇಳೆ ವಿ.ಎಫ್. ಪಾಟೀಲ, ಎಚ್.ವೈ. ಬಡಿಗೇರ, ಶೇಖರಯ್ಯ ಹಿರೇಮಠ, ನಾಗನಗೌಡ ಸಿದ್ದನಗೌಡ್ರ, ಜಗನ್ನಾಥಗೌಡ ಸಿದ್ದನಗೌಡ್ರ, ಬಾಬಣ್ಣ ನವಲಗುಂದ, ಜಗದೀಶ ಹಿರೇಮಠ, ಶ್ರೀಪಾಲ್ ಬಸ್ತಿ, ಅಶೋಕ ಮರಿಹಾಳ, ಸೋಮನಗೌಡ ಪಾಟೀಲ, ಮನೋಹರ್ ಮಿಸ್ಕಿನ್, ಚನ್ನಬಸಗೌಡ ಹನುಮಂತ ಗೌಡ್ರ, ಅಶೋಕ ಹುಲಗೂರು, ಯಲ್ಲಪ್ಪ ಹುಬ್ಬಳ್ಳಿ, ಶಿವಪ್ಪ ನೂಲ್ವಿ, ಯಲ್ಲಪ್ಪ ನೇರ್ತಿ ಸೇರಿದಂತೆ ಹಲವರಿದ್ದರು.