ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಪ್ರವಚನ ಎಂಬ ಜ್ಞಾನಾಮೃತವನ್ನು ಉಣಬಡಿಸಿ ಮನದಲ್ಲಿ ಸಂಸ್ಕಾರಗಳ ಪುಷ್ಪ ಅರಳುವಂತೆ ಮಾಡಿದವರು ಸಿದ್ದೇಶ್ವರ ಶ್ರೀಗಳು ಎಂದು ಹಿರಿಯ ಮುಖಂಡ ಸಂ.ಗು.ಸಜ್ಜನ ಹೇಳಿದರು. ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಿದ್ದೇಶ್ವರ ಮಹಾಸ್ವಾಮೀಗಳ ಚಿಂತನೆಗಳ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಹಲವಾರು ಮನಸುಗಳಿಗೆ ಜ್ಞಾನವನ್ನು ಧಾರೆಯೆರೆದ ಶ್ವೇತಪುಷ್ಪವಾಗಿದ್ದರು ಎಂದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರವಚನ ಎಂಬ ಜ್ಞಾನಾಮೃತವನ್ನು ಉಣಬಡಿಸಿ ಮನದಲ್ಲಿ ಸಂಸ್ಕಾರಗಳ ಪುಷ್ಪ ಅರಳುವಂತೆ ಮಾಡಿದವರು ಸಿದ್ದೇಶ್ವರ ಶ್ರೀಗಳು ಎಂದು ಹಿರಿಯ ಮುಖಂಡ ಸಂ.ಗು.ಸಜ್ಜನ ಹೇಳಿದರು.ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಿದ್ದೇಶ್ವರ ಮಹಾಸ್ವಾಮೀಗಳ ಚಿಂತನೆಗಳ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಹಲವಾರು ಮನಸುಗಳಿಗೆ ಜ್ಞಾನವನ್ನು ಧಾರೆಯೆರೆದ ಶ್ವೇತಪುಷ್ಪವಾಗಿದ್ದರು ಎಂದರು.
ವಿಶ್ರಾಂತ ಪ್ರಾಚಾರ್ಯ ಬೆಳಗಾವಿಯ ಡಾ.ಎಸ್.ಎಸ್.ತೇರದಾಳ ಮಾತನಾಡಿ, ಬಸವ ನಾಡಿನ ಪ್ರಕೃತಿಯನ್ನು ಪೂಜಿಸುವ ಸಿದ್ಧೇಶ್ವರ ಸ್ವಾಮೀಜಿಗಳು ಸಮಾಜದ ಸ್ವಾಸ್ತ್ಯ ಕಾಪಾಡುವ ಉದ್ದೇಶದಿಂದ ಬಸವಾದಿ ಪ್ರಥಮರ ಕಾಲದ ಸಮಾಜವನ್ನು ಸಮಕಾಲಿನವರಾಗಿ ಅನೇಕ ಮನಸ್ಸಗಳನ್ನು ತಿದ್ದಿದ ಮಹಾನುಭಾವರು. ವೇದ-ಉಪನಿಷತ್ತುಗಳನ್ನು ಅತಿ ಸರಳವಾಗಿ ಜನರಿಗೆ ಮನ ಮುಟ್ಟುವಂತ ಭಾಷೆಯಲ್ಲಿ ತಿಳಿಸಿದ್ದರು ಎಂದು ಹೇಳಿದರು. ಡಾ.ಆರ್.ವಿ.ಪಾಟೀಲ್ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಶತಮಾನ ಕಂಡ ಶ್ರೇಷ್ಠ ದಾರ್ಶನಿಕರು. ಅವರ ತತ್ವ ದರ್ಶನ, ಪ್ರವಚನಗಳು ಜನ ಸಾಮಾನ್ಯರಿಗೆ ಮನಸ್ಸಿಗೆ ಮುಟ್ಟುವಂತಹ ರೀತಿಯಲ್ಲಿ ತಿಳಿಸಿದವರು. ಈ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದರು.ಪ್ರಾಚಾರ್ಯ ಡಾ.ಎಸ್.ಟಿ.ಮೇರವಾಡೆ ಅಧ್ಯಕ್ಷತೆ ವಹಿಸಿದ್ದರು. ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಉಪಸ್ಥಿತರಿದ್ದರು. ಪ್ರೊ.ಎನ್.ಎಸ್.ಹರನಾಳ ಸ್ವಾಗತಿಸಿದರು, ಪ್ರೊ.ಬಿ.ಎ.ಕುಲಕರ್ಣಿ ವಂದಿಸಿದರು. ಪ್ರೊ.ವಿ.ಎ.ಅಂಗಡಿ ನಿರೂಪಿಸಿದರು.