ಬಯಲು ಸದೃಶ್ಯರಾಗಿ ಬದುಕಿದ ಸಿದ್ದೇಶ್ವರ ಶ್ರೀ: ಸಿದ್ಧರಾಜ ಪೂಜಾರಿ

| Published : Jun 10 2024, 12:45 AM IST

ಬಯಲು ಸದೃಶ್ಯರಾಗಿ ಬದುಕಿದ ಸಿದ್ದೇಶ್ವರ ಶ್ರೀ: ಸಿದ್ಧರಾಜ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸೂರಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಎಸ್. ಆರ್. ಹುಲಗಬಾಳಿ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ವಕೀಲ ವೆಂಕಟೇಶ ನಿಂಗಸಾನಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದಾರ್ಶನಿಕರು ಮತ್ತು ದಾರ್ಶನಿಕರ ದಾರ್ಶನಿಕರು ಆಗಿದ್ದ ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿ ನಮಗೆ ನಮ್ಮನ್ನು ತೋರಿಸಿದ ಮೇರು ವ್ಯಕ್ತಿತ್ವ ಮಹಾತ್ಮರು ಎಂದು ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.

ಶನಿವಾರ ಹೊಸೂರನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಬಕವಿ-ಬನಹಟ್ಟಿ ಹಮ್ಮಿಕೊಂಡ ಲಿಂ.ಆರ್. ಹುಲಗಬಾಳಿಯವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಹುಲಗಬಾಳಿ ಶರಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು. ಅಧ್ಯಾತ್ಮವನ್ನು ಅತ್ಯಂತ ಸರಳ, ಸ್ಫುಟವಾಗಿ ಹೇಳಿದವರು ಸಿದ್ದೇಶ್ವರ ಶ್ರೀಗಳು. ಅವರದು ನಿಷ್ಕಲ್ಮಶ ಜೀವನವಾಗಿತ್ತು. ನಿರ್ಲಿಪ್ತರಾಗಿ, ಬಯಲು ಸದೃಶ್ಯರಾಗಿ ಬದುಕಿದವರು. ಪ್ರಕೃತಿಯನ್ನು ಆರಾಧಿಸಿ, ಆನಂದಿಸಿ ದೇವರನ್ನು ಕಂಡ ಮಹಾನ್ ಸಂತರಾಗಿದ್ದರು. ಅವರು ಜ್ಞಾನ ಸೂರ್ಯರಾಗಿ ಜಗತ್ತಿನ ಮತ್ತು ಜನರಲ್ಲಿರುವ ಕತ್ತಲೆ ಕಳೆದು ಬೆಳುಕು ತೋರಿದವರಾಗಿದ್ದರು. ದಾರ್ಶನಿಕತೆಯೊಂದಿಗೆ ವೈಚಾರಿಕತೆ ಬೆಳೆಸಿದ ವಿಶ್ವ ಶ್ರೇಷ್ಠ ಸಂತರಾಗಿದ್ದರು ಎಂದು ಹೇಳಿದರು.

ಹುಲಗಬಾಳಿ ಶರಣ ಶ್ರೀ ಪ್ರಶಸ್ತಿ ಸ್ವೀಕರಿಸಿದ ವಿಜಯಪುರದ ಜ್ಞಾನಯೋಗಾಶ್ರಮದ ನಿವೃತ್ತ ಉಪನ್ಯಾಸಕ ಎಸ್.ಸಿ. ಸಲಬನ್ನವರ ಮಾತನಾಡಿ, ಪ್ರತಿಯೊಬ್ಬರು ಸಿದ್ದೇಶ್ವರ ಸ್ವಾಮೀಜಿಯವರ ಸರಳತೆ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿರಬೇಕು. ಇದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಉತ್ತಮ ಸ್ಪರ್ಧೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರಶಸ್ತಿ ಹೆಮ್ಮೆ ತಂದಿದೆ ಎಂದು ತಿಳಿಸಿದರು. .

ಪ್ರಗತಿಪರ ರೈತ, ವಕೀಲ ವೆಂಕಟೇಶ ನಿಂಗಸಾನಿ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎಸ್. ಹೊಸಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಕಿರಣ ಆಳಗಿ ಆಗಮಿಸಿದ್ದರು.

ಲಿಂ.ಆರ್. ಹುಲಗಬಾಳಿಯವರ ಸ್ಮರಣಾರ್ಥ ಕೊಡಮಾಡುವ ಹುಲಗಬಾಳಿ ಶರಣಶ್ರೀ ಪ್ರಶಸ್ತಿಯನ್ನು ಸಸಾಲಟ್ಟಿಯ ನಿವೃತ್ತ ಉಪನ್ಯಾಸಕ ಎಸ್. ಸಿ. ಸಲಬಣ್ಣವರಗೆ ಪ್ರದಾನ ಮಾಡಲಾಯಿತು.

ದತ್ತಿ ದಾನಿಗಳಾದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಮಹಾಲಿಂಗಪ್ಪ ಹುಲಗಬಾಳಿ, ಕಸಾಪ ಕಾರ್ಯದರ್ಶಿ ಹಾಗೂ ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ, ಮಹಾಶಾಂತ ಶೆಟ್ಟಿ, ಪ್ರೊ.ಬಿ.ಆರ್. ಪೊಲೀಸಪಾಟೀಲ, ಜಿ.ಎಸ್. ವಡಗಾಂವಿ, ಶಿವಾನಂದ ಬಾಗಲಕೋಟಮಠ, ಮಲ್ಲಪ್ಪ ಗಣಿ, ದಾನಪ್ಪ ಆಸಂಗಿ, ಎಂ.ಎಸ್. ಬದಾಮಿ, ಡಾ.ಡಿ.ಎ. ಬಾಗಲಕೋಟ, ಚಂದ್ರಶೇಖರ ಶೆಟ್ಟಿ, ಬಿ.ಎಸ್. ಬುಟ್ಟನ್ನವರ, ಈರಣ್ಣ ಗಣಮುಖಿ ಇದ್ದರು. ಶಿಕ್ಷಕ ಸಿ.ಪಿ. ಕರಲಟ್ಟಿ ಸ್ವಾಗತಿಸಿದರು. ರವಿ ಹೊನಗೌಡ ನಿರೂಪಿಸಿದರು. ಎಸ್.ಆರ್. ಬುದಿಹಾಳ ವಂದಿಸಿದರು.