ಕೆಸ್ತೂರು ಹಾಲಿನ ಡೇರಿ ಅಧ್ಯಕ್ಷರಾಗಿ ಸಿದ್ಧರಾಜು ಆಯ್ಕೆ

| Published : Jul 31 2025, 12:46 AM IST

ಕೆಸ್ತೂರು ಹಾಲಿನ ಡೇರಿ ಅಧ್ಯಕ್ಷರಾಗಿ ಸಿದ್ಧರಾಜು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೆಸ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿ. ಸಿದ್ಧರಾಜು ಅವಿರೋಧವಾಗಿ ಆಯ್ಕೆಯಾದರು.

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿ. ಸಿದ್ಧರಾಜು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಒಟ್ಟು ೧೨ ನಿರ್ದೇಶಕರು ಇರುವ ಈ ಸಂಘದಲ್ಲಿ ೪ ಮಂದಿ ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿ. ಸಿದ್ಧರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ ಇವರಿಬ್ಬರೂ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೮ ನಿರ್ದೇಶಕರು ಇದ್ದರಿಂದ ಬಹುಮತ ಇರುವ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಸುಭಾಷಿಣಿ ಇವರಿಬ್ಬರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ನೂತನ ಅಧ್ಯಕ್ಷ ಬಿ. ಸಿದ್ಧರಾಜು ಮಾತನಾಡಿ, ನಮ್ಮ ಸಂಘದಲ್ಲಿ ೩೦೦ ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಈ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೆ ಹಾಲು ಉತ್ಪಾದಕರು ಕಡಿಮೆ ಪ್ರಮಾಣದಲ್ಲಿದ್ದಾರೆ. ಇಲ್ಲಿ ಹಾಲಿನ ಉತ್ಪಾದನೆಯೆ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು. ಚಾಮುಲ್‌ನಿಂದ ಹೈನುಗಾರರಿಗೆ ದೊರಕುವ ವಿಮೆ, ಪಶು ಆಹಾರ, ರಾಸುಗಳಿಗೆ ನೀಡುವ ಚಿಕಿತ್ಸೆ, ಹೈನುಗಾರಿಗೆ ದೊರಕುವ ಆರೋಗ್ಯ ಸೇವೆಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ನಮ್ಮ ಸಂಘದ ಪ್ರಗತಿಗೆ ಪ್ರಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.ಉಪಾಧ್ಯಕ್ಷೆ ಲಲಿತಮ್ಮ ನಿರ್ದೇಶಕರಾದ ಪ್ರಭುಸ್ವಾಮಿ, ರಂಗಮ್ಮ, ಚಿಕ್ಕಸಿದ್ದಶೆಟ್ಟಿ, ಕೆ.ಜಿ. ಗುರುಸ್ವಾಮಿ, ಕೆ. ಮಂಜುನಾಥ್, ನಂಜುಂಡನಾಯಕ ಮುಖಂಡರಾದ ಮಧು ಇದ್ದರು.