ಸಿದ್ಧರಾಮೇಶ್ವರರು ಶ್ರೇಷ್ಠ ವಚನಕಾರರು: ಮಲ್ಲಪ್ಪ ವಾಡಿ

| Published : Jan 16 2024, 01:49 AM IST

ಸಿದ್ಧರಾಮೇಶ್ವರರು ಶ್ರೇಷ್ಠ ವಚನಕಾರರು: ಮಲ್ಲಪ್ಪ ವಾಡಿ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿಯೇ ಸಕಲ ಜೀವಿಗಳಿಗೆ ಬದಕಲು ಕೆರೆಕುಂಟೆ ಕಟ್ಟಿಸಿದ ಮಾನವೀಯತೆಯ ಹರಿಕಾರ ಸಿದ್ಧರಾಮೇಶ್ವರರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

೧೨ನೇ ಶತಮಾನ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರ ಒಬ್ಬರಾಗಿದ್ದರು. ಆ ಕಾಲದಲ್ಲಿಯೇ ಸಕಲ ಜೀವಿಗಳಿಗೆ ಬದಕಲು ಕೆರೆಕುಂಟೆ ಕಟ್ಟಿಸಿದ ಮಾನವೀಯತೆ ಹರಿಕಾರ ಎಂದು ತಾಲೂಕು ಭೋವಿ ಸಮಾಜದ ಹಿರಿಯ ಮುಖಂಡ ಮಲ್ಲಪ್ಪ ವಾಡಿ ಹೇಳಿದರು.

ಬೊಮ್ಮನಳ್ಳಿ ಕ್ರಾಸ್‌ನಲ್ಲಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಮಾತನಾಡಿ, ಸಿದ್ಧರಾಮೇಶ್ವರರ ವಚನಗಳು ನಮಗೆ ದಾರಿದೀಪವಾಗಿವೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಭೋವಿ ಸಮಾಜದ ಅಧ್ಯಕ್ಷ ಜಗನ್ನಾಥ ಗುತ್ತೆದಾರ ಮಾತನಾಡಿ, ನಮ್ಮ ಸಮಾಜವು ತೀರಾ ಹಿಂದುಳಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ ಶೈಕ್ಷಣಿಕವಾಗಿ ಹಿಂದುಳಿಯುತ್ತಿದೆ. ನಮ್ಮ ಸಮಾಜಕ್ಕೆ ಸಮುದಾಯ ಭವನ ಅಗತ್ಯವಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ನಮ್ಮ ಮನವಿ ಸ್ಪಂದಿಸಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಬಸವರಾಜ ವಾಡಿ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಪುರಸಭೆ ಸದಸ್ಯ ಜಗನ್ನಾಥ ಗುತ್ತೆದಾರ, ಬಸವರಾಜವಾಡಿ, ವಿಠಲ ಕುಸಾಳೆ, ಶ್ರೀಕಾಂತಪೀಟಲ, ಹಣಮಂತ ಭೊವಿ, ಅಲ್ಲದೇ ಬೋವಿ ಸಮಾಜದ ಅನೇಕರಿದ್ದರು. ಕುಂಚಾವರಂ, ಪೋಲಕಪಳ್ಳಿ, ಮಿರಿಯಾಣ, ಚಿಮ್ಮಾಇದಲಾಯಿ, ಚಿಮ್ಮನಚೋಡ, ಚಂದನಕೇರಾ, ಸುಲೇಪೆಟ, ಗಡಿಕೇಶ್ವರ, ಕೋಡ್ಲಿ,ರಟಕಲ್, ಕನಕಪೂರ, ಬೊಮ್ಮನಳ್ಳಿ, ಚಂದಾಪೂರ ಗ್ರಾಮಗಳಲ್ಲಿ ಭೋಮಿ ಸಮಾಜದವರು ಸಿದ್ಧರಾಮೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸಿದರು.