ಸಿದ್ಧರಾಮೇಶ್ವರರು ಯೋಗಿಗಳ ಯೋಗಿ: ಶಾಸಕ ಸಿದ್ದು ಸವದಿ

| Published : Jan 15 2025, 12:48 AM IST

ಸಿದ್ಧರಾಮೇಶ್ವರರು ಯೋಗಿಗಳ ಯೋಗಿ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಓದುವುದರ ಜೊತೆಗೆ ಅವುಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವು ಮಹತ್ತರವಾದ ಜವಾಬ್ದಾರಿ ಸಮಾಜ ಬಾಂಧವರ ಮೇಲಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹನ್ನೆರಡನೆಯ ಶತಮಾನದ ಮಹಾನ್ ವಚನಕಾರ ಸಿದ್ಧರಾಮೇಶ್ವರರು ಯೋಗಿಗಳ ಯೋಗಿಯಾಗಿದ್ದರು. ಅಲ್ಲಮ, ಬಸವ ಹಾಗೂ ಚೆನ್ನಬಸವಣ್ಣನ ಸಾಲಿನಲ್ಲಿ ನಿಲ್ಲುವ ಶ್ರೇಷ್ಠ ಅನುಭವಿಯಾಗಿದ್ದರು. ಅವರ ವಚನ ಓದುವುದರ ಜೊತೆಗೆ ಅವುಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವು ಮಹತ್ತರವಾದ ಜವಾಬ್ದಾರಿ ಸಮಾಜ ಬಾಂಧವರ ಮೇಲಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ರಬಕವಿ-ಬನಹಟ್ಟಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಸಿದ್ಧರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಮಾಜವು ಮುಂದೆ ಬರಲು ಸಾಧ್ಯವಾಗುತ್ತದೆ. 12ನೇ ಶತಮಾನದ ವಚನಕಾರರ ವಚನಗಳು ಅಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದ್ದರಿಂದ ವಚನಗಳನ್ನು ಓದುವುದರ ಮೂಲಕ ವಚನಕಾರರ ತತ್ವ ಸಿದ್ಧಾಂತಗಳು ಅರಿವಾಗುತ್ತವೆ. ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿ, ಚನ್ನಬಸಯ್ಯ ಮಠಪತಿ, ಸಮಾಜದ ಮುಖಂಡರಾದ ರಾಮಣ್ಣ ಪಾತ್ರೋಟ, ಈಶ್ವರ ಪೂಜಾರಿ, ಸುಬಾಸ ಮನವಡ್ಡರ, ಶಂಕರ ಪೂಜಾರಿ, ಪ್ರಕಾಶ ಬೆಲ್ಲಂ, ಪರಶುರಾಮ ತೇರದಾಳ, ಪರಶುರಾಮ ಪಾತ್ರೋಟ, ಮಾರುತಿ ಗಾಡಿವಡ್ಡರ, ಬಾಬು ಗಾಡಿವಡ್ಡರ, ಸದಾಶಿವ ಗಾಡಿವಡ್ಡರ, ಅಶೋಕ ಮನವಡ್ಡರ, ಕುಮಾರ ಪಾತ್ರೋಟ, ಸಂಜು ಬೆಲ್ಲಂ ಸೇರಿದಂತೆ ಅನೇಕರು ಇದ್ದರು.