ಸಾರಾಂಶ
ಅಫಜಲ್ಪುರ ತಾಲೂಕಿನ ಬಡದಾಳ ಜಿ.ಪಂ ಮತಕ್ಷೇತ್ರದ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಸಿದ್ದಾರ್ಥ ಬಸರಿಗಿಡ ಅವರಿಗೆ ಬೆಂಗಳೂರಿನ ಆಟೋರಾಜ ಶಂಕರನಾಗ ಅಭಿಮಾನಿಗಳ ಸಂಘದವರು ಕೊಡಮಾಡುವ ವಾರ್ಷಿಕ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಬಡದಾಳ ಜಿ.ಪಂ ಮತಕ್ಷೇತ್ರದ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಸಿದ್ದಾರ್ಥ ಬಸರಿಗಿಡ ಅವರಿಗೆ ಬೆಂಗಳೂರಿನ ಆಟೋರಾಜ ಶಂಕರನಾಗ ಅಭಿಮಾನಿಗಳ ಸಂಘದವರು ಕೊಡಮಾಡುವ ವಾರ್ಷಿಕ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬೆಂಗಳೂರಿನ ಲೀಲಾದ್ರಿ ಕಲಾ ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಶಂಕರನಾಗ್ ಅಭಿಮಾನಿಗಳ ಸಂಘದವರು ಪ್ರತಿವರ್ಷ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಸತ್ಕರಿಸುತ್ತಿದ್ದು ಈ ವರ್ಷದ ಪ್ರಶಸ್ತಿ ಕಾಂಗ್ರೆಸ್ ಮುಖಂಡ, ಮಾಜಿ ಜಿ.ಪಂ ಸದಸ್ಯ ಸಿದ್ದಾರ್ಥ ಬಸರಿಗಿಡ ಆಯ್ಕೆಯಾಗಿದ್ದಾರೆ.ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತವಲಯದಲ್ಲಿರುವ ಸಿದ್ದಾರ್ಥ ಬಸರಿಗಿಡ ಅವರು ಒಂದು ಬಾರಿ ಜಿ.ಪಂ ಸದಸ್ಯರಾಗಿ ಉತ್ತಮ ಜನಸೇವೆ ಮಾಡಿದ್ದರು.ಅಲ್ಲದೆ ಅಧಿಕಾರವಿಲ್ಲದಿದ್ದಾಗಲೂ ಕೂಡ ಎಲ್ಲಾ ಸಮುದಾಯಗಳ ಜನರೊಂದಿಗೆ ಒಡನಾಟ ಹೊಂದಿದ್ದು ಎಲ್ಲರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮೂಲಕ ಜನಾನೂರಾಗಿ ಜೀವನ ನಡೆಸುತ್ತಿದ್ದಾರೆ. ಇವರ ಸೇವಾ ಕಾರ್ಯವನ್ನು ಗುರುತಿಸಿದ ಶಂಕರನಾಗ್ ಅಭಿಮಾನಿಗಳ ಸಂಘದವರು ಈ ಬಾರಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿ ಸತ್ಕರಿಸಿದ್ದಾರೆ.
ಇವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಅಫಜಲ್ಪುರ ಶಾಸಕ ಎಂ.ವೈ ಪಾಟೀಲ್, ಕೆಪಿಸಿಸಿ ಸದಸ್ಯರಾದ ಅರುಣಕುಮಾರ ಎಂ.ವೈ ಪಾಟೀಲ್, ಪಪ್ಪು ಪಟೇಲ್, ಚಿಂಚೋಳಿ ಮಠದ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಮುಖಂಡರಾದ ದಯಾನಂದ ದೊಡ್ಮನಿ, ಪ್ರಕಾಶ ಜಮಾದಾರ, ಮತೀನ ಪಟೇಲ, ರಮೇಶ ಪೂಜಾರಿ, ರಮೇಶ ದೊಡ್ಮನಿ, ಶಿವಾನಂದ ದೊಡ್ಮನಿ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.