ಯಲ್ಲಾಪುರಕ್ಕೆ ಆಗಮಿಸಿದ ಸಿದ್ಧಾರೂಢರ ಜ್ಯೋತಿ ರಥಯಾತ್ರೆ

| Published : Jan 17 2025, 12:48 AM IST

ಯಲ್ಲಾಪುರಕ್ಕೆ ಆಗಮಿಸಿದ ಸಿದ್ಧಾರೂಢರ ಜ್ಯೋತಿ ರಥಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಡಿ. ೨೩ರಿಂದ ಹಮ್ಮಿಕೊಂಡಿರುವ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ಯಾತ್ರೆಯು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳ ಪ್ರಮುಖ ಪಟ್ಟಣಗಳಲ್ಲಿ ಸಂಚರಿಸಿ ಫೆ. ೧೮ ರಂದು ಹುಬ್ಬಳ್ಳಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಿದ್ಧಾರೂಢ ಮಠದಲ್ಲಿ ರಥಯಾತ್ರೆ ಸಂಪನ್ನಗೊಳ್ಳಲಿದೆ

ಯಲ್ಲಾಪುರ: ಪಟ್ಟಣಕ್ಕೆ ಆಗಮಿಸಿದ ಸಿದ್ಧಾರೂಢರ ಜ್ಯೋತಿ ಯಾತ್ರೆಗೆ ಭಕ್ತಿಪೂರ್ವಕವಾದ ಸ್ವಾಗತ ನೀಡಲಾಯಿತು.

ವೀರಶೈವ ಲಿಂಗಾಯತ ಸಮುದಾಯದವರು ಭಜನಾ ಮೆರವಣಿಗೆ ಮೂಲಕ ಬಸವೇಶ್ವರ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿ ಮುಂದಿನ ಯಾತ್ರೆಗೆ ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಟ್ರಸ್ಟ್‌ ಕಮಿಟಿಯ ಚೇರ್‌ಮನ್‌ ಬಸವರಾಜ ಕಲ್ಯಾಣ ಶೆಟ್ಟರ ಮಾತನಾಡಿ, ಹುಬ್ಬಳ್ಳಿಯ ಜಗದ್ಗುರು ಶ್ರೀ ಗುರುಸಿದ್ಧಾರೂಢರ ೧೯೦ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ ೧೧೫ನೇ ಜಯಂತ್ಯುತ್ಸವ ಮತ್ತು ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವದ ನಿಮಿತ್ತ ಕಳೆದ ಡಿ. ೨೩ರಿಂದ ಹಮ್ಮಿಕೊಂಡಿರುವ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ಯಾತ್ರೆಯು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳ ಪ್ರಮುಖ ಪಟ್ಟಣಗಳಲ್ಲಿ ಸಂಚರಿಸಿ ಫೆ. ೧೮ ರಂದು ಹುಬ್ಬಳ್ಳಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಿದ್ಧಾರೂಢ ಮಠದಲ್ಲಿ ರಥಯಾತ್ರೆ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಿದ್ಧಾರೂಢ ಮಠದ ವೈಸ್ ಚೇರ್‌ಮನ್ ಮಂಜುನಾಥ ಮುನವಳ್ಳಿ, ಜ್ಯೋತಿಯಾತ್ರೆ ಅಧ್ಯಕ್ಷ ಉದಯಕುಮಾರ ನಾಯ್ಕ, ಈರಣ್ಣ ಪಾಳೇದ, ಬಸವೇಶ್ವರ ದೇವಾಲಯ ಸಮಿತಿಯ ಬಸವರಾಜ ಗೌಳಿ, ಉದಯ ಜಾಲಿಹಾಳ , ವಿರೂಪಾಕ್ಷ ಜೋಗಾರಶೆಟ್ಟರ, ಶಿವಯ್ಯ ಹಿರೇಮಠ, ವಿರೂಪಾಕ್ಷ ಪಾಟೀಲ, ಜಗದೀಶ ಹಿರೇಮಠ, ವಿಜಯ ಹಿರೇಮಠ, ಜಯರಾಜ ಗೋವಿ, ಹಾಗೂ ಅಕ್ಕನ ಬಳಗದ ರತ್ನಾ, ಪುಷ್ಪಾ, ಶಶಿಕಲಾ, ಗೌರಿ, ರೇಣುಕಾ, ಅನುರಾಧಾ, ಪಾರ್ವತಿ, ಪ್ರಭಾವತಿ ಇತರರು ಇದ್ದರು.