ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಹೊರ ವಲಯದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ರಸ್ತೆ ಮಾರ್ಗದ ಪಕ್ಕದಲ್ಲಿ ಪ್ರಾರಂಭಿಸಿರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ ಘಟಕವನ್ನು ಪ್ರಾರಂಭಿಸಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿದ ಎಲ್ಲ ಷರತ್ತುಗಳನ್ನು ಕ್ರಮಬದ್ದವಾಗಿ ಪಾಲಿಸಿದೆ ಯಾವುದೇ ತೊಂದರೆ ಇಲ್ಲ ಇದನ್ನೇ ಶುಕ್ರವಾರ ಮಂಡಳಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಬೆಳಗಾವಿ ವಿಭಾಗದ ಗೋಪಾಲಕೃಷ್ಣ ಸಣ್ಣತಂಗಿ ಹೇಳಿದರು.ಸಿದ್ಧಸಿರಿ ಎಥೆನಾಲ್ ಪವರ್ ಘಟಕಕ್ಕೆ ಗುರುವಾರ ಕಲಬುರಗಿ ಅಧಿಕಾರಿಗಳೊಂದಿಗೆ ಕಬ್ಬು ನುರಿಸುವುದು, ಇಥೆನಾಲ್ ಉತ್ಪಾದನೆ ಮತ್ತು ಇನ್ನಿತರ ಘಟಕಗಳಿಗೆ ಭೇಟ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ನನಗೆ ಭೇಟಿ ನೀಡಿ ವರದಿ ನಿಡುವಂತೆ ಆದೇಶ ನೀಡಿದ್ದರಿಂದ ಸಿದ್ಧಸಿರಿ ಎಥೆನಾಲ್ ಪವರ ಘಟಕಕ್ಕೆ ಭೇಟಿ ನೀಡಿ ಎಲ್ಲ ಕಡೆಗಳಲ್ಲಿ ಪರಿಶೀಲಿಸಿದ್ದೇನೆ.ಮಂಡಳಿ ನೀಡಿದ ಎಲ್ಲ ಪರತ್ತುಗಳನ್ನು ಪಾಲಿಸಿದೆ ಎಂದು ಹೇಳಿದರು.ಸಿದ್ಧಸಿರಿ ಎಥೆನಾಲ್ ಪವರ ಘಟಕ ಪ್ರಾರಂಭಿಸಲು ಹೈಕೋರ್ಟ್ ನೀಡಿದ ಆದೇಶವನ್ನು ಮಂಡಳಿ ಯಾಕೆ ಪಾಲಿಸುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಆಡಳಿತ ಅಧಿಕಾರಿ ಅಲ್ಲ ಮಂಡಳಿ ನೀಡಿದ ಆದೇಶದಂತೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನಾನು ರೈತನ ಮಗನು ಆಗಿರುವುದರಿಂದ ರೈತರ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಕಂಪನಿ ಮೇಲೆ ಹೆಚ್ಚಿನ ಅವಲಂಬಿತರಾಗಿ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಕಬ್ಬು ರೈತರು ಬೆಳೆದಿದ್ದಾರೆ ಎಂದು ಮಾಹಿತಿ ಪಡೆದಿದ್ದೇನೆ. ಅತೀ ಹಿಂದುಳಿದ ಪ್ರದೇಶದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಬ್ಬು ಬೆಳೆಯುವ ರೈತರಿಗೆ ನಿರಾಶೆ ಆಗದಂತೆ ಯಾವುದೇ ಅನ್ಯಾಯವಾಗದಂತೆ ವರದಿಯನ್ನು ನೀಡುತ್ತೇನೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ (ಎಸ್‌ಇಓ) ಗೋಪಾಲಕೃಷ್ನ ಸಣ್ಣತಂಗಿ ಹೇಳಿದರು.
ಕಲಬುರಗಿ ಜಿಲ್ಲೆಯ ಅಧಿಕಾರಿ ಸೋಮಶೇಖರ ಕೆ.ಎಂ. ಶಾರದಾ, ಸಿದ್ಧಸಿರಿ ಎಥೆನಾಲ್ ಪವರ ಘಟಕದ ಜಿಎಂ ಶಿವಕುಮಾರ ಪಾಟೀಲ, ಅನೀಲಕುಮಾರ ಕಾಳಗಿ, ಸಿ.ಎಸ್. ಹೊಸಮನಿ, ಭೀಮು ಕುಳಗೇರಿ ಇನ್ನಿತರಿದ್ದರು.