ಸಾರಾಂಶ
ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಜನರ ಜೀವನಕ್ಕೆ ಮತ್ತು ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಅವರ ಸಂದೇಶ, ಹಿತನುಡಿಗಳು ಎಂದೆಂದಿಗೂ ಜೀವಂತ ಎಂದು ಸಿದ್ಧೇಶ್ವರ ಮಹಾಸ್ವಾಮಿಗಳ ಪರಮ ಶಿಷ್ಯರಾದ ಗುರುದೇವಾಶ್ರಮದ ಡಾ.ಅಮೃತಾನಂದ ಮಹಾಸ್ವಾಮಿಗಳು ನುಡಿದರು.
ತಾಂಬಾ: ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಜನರ ಜೀವನಕ್ಕೆ ಮತ್ತು ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಅವರ ಸಂದೇಶ, ಹಿತನುಡಿಗಳು ಎಂದೆಂದಿಗೂ ಜೀವಂತ ಎಂದು ಸಿದ್ಧೇಶ್ವರ ಮಹಾಸ್ವಾಮಿಗಳ ಪರಮ ಶಿಷ್ಯರಾದ ಗುರುದೇವಾಶ್ರಮದ ಡಾ.ಅಮೃತಾನಂದ ಮಹಾಸ್ವಾಮಿಗಳು ನುಡಿದರು. ಚಿಕ್ಕರೂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಜ.೨೫ರವರೆಗೆ ನಡೆಯಲಿರುವ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿದ್ದನಗೌಡ ಬೀರಾದಾರ, ಅಡವೇಪ್ಪ ಕೊಂಡಗೂಳಿ, ಸಿದ್ದಗೊಂಡಪ್ಪಗೌಡ ಪಾಟೀಲ, ಸಿದ್ದಣ್ಣಸಾಹುಕಾರ ಚಂಡಕಿ, ಸತೀಶ ಬಾಗಲಕೋಟ, ನಾಗಣ್ಣ ಮುಳಚಗಿ, ಬಸವರಾಜ ಕುಂಬಾರ, ಹುಸೇನಸಾಬ ಕೆಂಗನಾಳ, ಭೈರು ಭೈರೋಡಗಿ, ಅಣ್ಣಪ್ಪ ಪೂಜಾರಿ, ಚನ್ನಪ್ಪ ಬನಸೋಡೆ, ಭಿಮರಾಯ ಪಾಸೋಡಿ, ದೇವಾನಂದ ಹೂಗಾರ, ವಿಠಲ ನಾಟಿಕಾರ, ದೇವಾನಂದ ಬಾಗಲಕೋಟ, ರಾವುತ ಯಳಕೋಟಿ, ಸೋಮಣ್ಣ ಬಾಗಲಕೋಟಿ ಇದ್ದರು.
ಪ್ರವಚನ ಕಾರ್ಯಕ್ರಮವು ಬೆಳಗ್ಗೆ.೬.೩೦ ರಿಂದ ೭.೩೦ರ ವರೆಗೆ ಜರಗುವುದು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.