ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಅನ್ನ, ಆರೋಗ್ಯ, ಶಿಕ್ಷಣವೆಂಬ ಘೋಷವಾಕ್ಯದೊಂದಿಗೆ ದೀನ ದಲಿತರ ಮತ್ತು ನೊಂದವರ ಸೇವೆಯಲ್ಲಿ ಕಳೆದ 1 ವರ್ಷದಿಂದ ತೊಡಗಿಸಿಕೊಂಡಿರುವ ತಾಲೂಕಿನ ಜುಗೂಳ ಗ್ರಾಮದ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನ ಕಾರ್ಯಕ್ಕೆ ರಾಷ್ಟ್ರೀಯಮಟ್ಟದ ಜೀವನ ಜ್ಯೋತಿ ಪ್ರಶಸ್ತಿ ಲಭಿಸಿದ್ದು, ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೆಂಗಳೂರಿನ ಕನಸು ಡಿಜಿಟಲ್ ಸಲ್ಯೂಷನ್ಸ್ ಮತ್ತು ಎನ್.ಎಚ್.ಎಲ್ ವರ್ಲ್ಡ್ ಯುನಿಕ್ ಇವೆಂಟ್ಸ್ ನ್ಯೂಸ್ ಮತ್ತು ಅರ್ಗನೈಜೇಶನ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ನಯನ ಸಭಾ ಭವನದಲ್ಲಿ ಮಾ.3 ರಂದು ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲಿ ಸಾಧನೆ ಮಾಡಿರುವ ಸಾಧಕರಿಗೆ ರಾಷ್ಟ್ರೀಯ ಮಟ್ಟದ ಜೀವನ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಮಾರಂಭದಲ್ಲಿ ಸಂಘಟನೆಯ ನಿರ್ದೇಶಕರಾದ ಲಾವಣ್ಯಾ ವಿನೋದ, ರಾಕೇಶ ಕೆ.ಎಸ್, ಸುರೇಶ ಕುಮಾರ ಮತ್ತು ಬೆಳಗಾವಿ ಅಣ್ಣಪೂರ್ಣೆಶ್ವರಿ ಫೌಂಡೇಶನ್‌ನ ಅಧ್ಯಕ್ಷ ಮಹಾಂತೇಶ ಕಡಲಗಿ ಉಪಸ್ಥಿತರಿದ್ದರು. ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ಗೆ ಈಗಾಗಲೇ ಅನೇಕ ಸಂಘ-ಸಂಸ್ಥೆಗಳಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅತ್ಯುತ್ತಮ ಸೋಷಿಯಲ್ ವರ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈಗ ಈ ಪ್ರಶಸ್ತಿ ಲಭಿಸಿದ್ದರಿಂದ ಅವರಿಗೆ ಅಭಿನಂದನೆಗಳು ಹರಿದು ಬರುತ್ತಿವೆ.ಬಡವರಿಗಾಗಿ ಸದಾಕಾಲ ಅನ್ನದಾನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಮತ್ತು ನಮ್ಮ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ನಿರ್ಮಾಣ ಮಾಡಬೇಕು. ನಿರ್ಗತಿಕರಿಗಾಗಿ ವೃದ್ಧಾಶ್ರಮ ನಿರ್ಮಿಸಿ, ಜನರ ಸೇವೆ ಮಾಡುವ ಆಶಯ ಹೊಂದಿದ್ದೇವೆ.
-ಬಾಹುಬಲಿ ಉಪಾಧ್ಯೆ, ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷರು.