ಹಂಡನಹಳ್ಳಿಯಲ್ಲಿ ಏ.5 ರಿಂದ 7ರವರೆಗೆ ಸಿದ್ಧಿವಿನಾಯಕ ದೇವಸ್ಥಾನ ಉದ್ಘಾಟನೆ, ವಿವಿಧ ಪೂಜೆ

| Published : Apr 05 2025, 12:50 AM IST

ಹಂಡನಹಳ್ಳಿಯಲ್ಲಿ ಏ.5 ರಿಂದ 7ರವರೆಗೆ ಸಿದ್ಧಿವಿನಾಯಕ ದೇವಸ್ಥಾನ ಉದ್ಘಾಟನೆ, ವಿವಿಧ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಏ.7 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಪಿಂಡಿಕಾ ಪೂಜೆ, ದೇವರುಗಳ ವಿಗ್ರಹ ಅಷ್ಟಬಂಧನ ಪ್ರತಿಷ್ಠೆ, ಕಳಶಾರಾಧನೆ, ನಯನೋನ್ಮೀಲನ ಹೋಮ, ಮೂರ್ತಿ ಹೋಮ, ಶಾಂತಿಹೋಮ, ಮಹಾಸಂಕಲ್ಪಪೂರ್ವಕ ಮಹಾ ಪೂರ್ಣಾಹುತಿ, ಗ್ರಾಮಪ್ರದಕ್ಷಣೆ, ಮಹಾ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇವೆ, ಗೋದರ್ಶನ, ದರ್ಪದರ್ಶನ, ಪಂಚ ಕನ್ಯೆಯರ ದರ್ಶನ, ಕೂಷ್ಮಾಂಡ ಬಲಿ, ಕದಳಿ ವೃಕ್ಷ ಛೇದನ ,ಸಂಗೀತ ಸೇವೆ ,ವಾದ್ಯಸೇವೆ, ಮಹಾ ನೈವೇದ್ಯ, ರಾಷ್ಟ್ರಾಶೀರ್ವಾದ, ಮಹಾ ಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವಿದೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಹಂಡನಹಳ್ಳಿಯಲ್ಲಿ ನೂತನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಮೂರು ದಿನಗಳ ಕಾಲ ದೇವರುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಗ್ರಾಮಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇಂದಿನಿಂದ (ಏ.5) ಆರಂಭಗೊಳ್ಳುವ ಪೂಜಾ ಕಾರ್ಯಕ್ರಮಗಳು ಏ.7ರವರೆಗೆ ನಡೆಯಲಿವೆ. ಏ.7 ರಂದು ನೂತನ ದೇಗುಲದಲ್ಲಿ ಶ್ರೀ ಸಿದ್ಧಿ ವಿನಾಯಕ ದೇವರ ಮತ್ತು ನಾಗದೇವತೆಗಳ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ನೇತೃತ್ವದಲ್ಲಿ ದಿವ್ಯ ಸಾನಿಧ್ಯವನ್ನು ಕನಕಪುರ ತಾಲೂಕು ಶಿವಗಿರಿ ಬೆಟ್ಟದ ಅನ್ನದಾನೇಶ್ವರ ಸ್ವಾಮೀಜಿ ಮತ್ತು ಬೆಂಗಳೂರು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ದೇವತಾ ಕಾರ್ಯಕ್ರಮಕ್ಕೆ ಮಾಜಿ ಸಿಎಂ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್‍.ಡಿ.ಕುಮಾರಸ್ವಾಮಿ ಮತ್ತು ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಕಾವೇರಿ ನೀರಾವರಿ ನಿಗಮದ ನಿರ್ದೇಶಕರಾದ ಮಹೇಶ್ ಪಾಲ್ಗೊಳ್ಳಲಿದ್ದಾರೆ.

ಮೂರು ದಿನಗಳ ಕಾಲ ವಿವಿಧ ಹೋಮ, ಹವನ, ಪೂಜೆ:

ಏ.5 ರಂದು ಸಂಜೆ ದೇವಸ್ಥಾನದಲ್ಲಿ ಗಂಗೆಪೂಜೆ, ಗಣಪತಿ ಪೂಜೆ, ಧ್ವಜಾರೋಹಣ, ವಾಸ್ತು ಕಳಶ ಆರಾಧನೆ, ಗಣಪತಿ ಹೋಮ, ವಾಸ್ತು ಹೋಮ, ಕ್ಷೇತ್ರ ಪಾಲಕ ಹೋಮ ,ಲಘು ಪೂರ್ಣಾಹುತಿ, ವಾಸ್ತು ಬಲಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.

ಏ.6 ರಂದು ಬೆಳಗ್ಗೆ ಸುಪ್ರಭಾತ, ವೇದ ಪಾರಾಯಣ, ದ್ವಾರ ತೋರಣ ಪೂಜೆ, ಯಾಗ ಶಾಲಾ ಪ್ರವೇಶ, ಅಂಕುರಾರ್ಪಣೆ, ಪ್ರಧಾನ ಕಳಶ ಆರಾಧನೆ, ನವಗ್ರಹ ಆರಾಧನೆ, ಮೃತ್ಯುಂಜಯ ಕಳಶ ಆರಾಧನೆ ,108 ಕಲಶ ಆರಾಧನೆ, ನವಗ್ರಹ, ಮೃತ್ಯುಂಜಯ ಹೋಮ, ಪರಿವಾರ ಹೋಮ, ಲಘು ಪೂರ್ಣಾಹುತಿ ,ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ವೇದಪಾರಾಯಣ ,ಸ್ತೋತ್ರ ಪಾರಾಯಣ, ಕಳಶ ಆರಾಧನೆ, ಪಂಚಗವ್ಯ ಸ್ಥಾಪನ, ಜಿಂಬಾಶುದ್ದಿ, ಧನಾದಿವಾಸ, ರತ್ನಾಧಿವಾಸ ,ಧಾನ್ಯ ದಿವಾಸ, ಪುಷ್ಪಾ ದಿವಾಸ, ಶಯ್ಯೂ ದಿವಾಸ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.