ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಗ್ರಾಮದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಬೆಟ್ಟವನ್ನು ಹತ್ತಿ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಮನೆ ದೇವರ ಪೂಜೆಗಾಗಿ ಕುಟುಂಬ ಸಮೇತರಾಗಿ ಬೆಟ್ಟದ ಹತ್ತಿದರು, ದಾರಿಯುದ್ದಕ್ಕೂ ದಣಿವಾರಿಸಲು ಹಣ್ಣು, ಹಂಪಲು, ನೀರಿನ ವ್ಯವಸ್ಥೆಯನ್ನು ವ್ಯಾಪಾರಿಗಳು ಮಾಡಿದ್ದರಿಂದ ಬಾಯಾರಿಕೆ ದಣಿಸಿಕೊಂಡು ದೇವರ ದರ್ಶನವನ್ನು ಪಡೆದರು.ಬೆಟ್ಟದ ಮೇಲಿರುವ ಕೊಳ ಬಸಪ್ಪನ, ಗರುಡುಗಂಬ, ವಿಮಾನ ಕಲ್ಲು ಮೂಡಲ ಗವಿ, ಆಂಜನೇಯ ಸ್ವಾಮಿ ಅಲ್ಲಿರುವ ಗವಿಗಳನ್ನು ದರ್ಶನ ಮಾಡಿ, ನೋಡಿ ಪ್ರವಾಸಿಗರು ಮತ್ತು ಭಕ್ತರು ಅಮಾವಾಸ್ಯೆಯ ಪೂಜೆ ನೆರವೇರಿಸಿದರು ಗಾವಡೆಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಬೆಟ್ಟವನ್ನು ಹತ್ತಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಬಂದಂತ ಸಾವಿರಾರು ಭಕ್ತರಿಗೆ ತಮ್ಮ ಮಠದ ವತಿಯಿಂದ ಅನ್ನದಾನ ಕಾರ್ಯಕ್ರಮವನ್ನು ನೆರವೇರಿಸಿದರು.ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಎಸ್.ಐ. ಶಿವಶಂಕರ್, ಪಿಡಿಒ ಮಂಜುನಾಥ್, ಕಾರ್ಯದರ್ಶಿ ನೌಕರರ ಶ್ರೀನಿಧಿ, ಮುಖಂಡರಾದ ತಾಲೂಕು ಶಿವಕುಮಾರ ಸ್ವಾಮೀಜಿ, ಬಳಗದ ಅಧ್ಯಕ್ಷ ಶಿವಕುಮಾರಸ್ವಾಮಿ, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶಿವದೇವ, ಸಮಾಜ ಸೇವಕ ಎಸ್. ಮಲ್ಲೇಶ್, ಕೂರ್ಗಲ್ಲು ಗ್ರಾಮದ ಶಾಂತಕುಮಾರ್, ಮಂಜುನಾಥ್, ಶಂಕರ್, ಪರಮೇಶ್, ಗೌಡಗೆರೆ ಮಠದ ಭಕ್ತ ವೃಂದ, ಮಠದ ವಿದ್ಯಾರ್ಥಿಗಳು ಹಲವಾರು ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.