ಸಾರಾಂಶ
ಚಾಮುಂಡಿಬೆಟ್ಟ ಸೇರಿದಂತೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಸಿದ್ದಾರ್ಥನಗರದಲ್ಲಿ ಚಾಮುಂಡೇಶ್ವರಿ ಭಕ್ತಾ ವೃಂದದವರು ಭಕ್ತಾದಿಗಳಿಂದ ಸಹಿ ಸಂಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡಿಬೆಟ್ಟ ಸೇರಿದಂತೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಸಿದ್ದಾರ್ಥನಗರದಲ್ಲಿ ಚಾಮುಂಡೇಶ್ವರಿ ಭಕ್ತಾ ವೃಂದದವರು ಭಕ್ತಾದಿಗಳಿಂದ ಸಹಿ ಸಂಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಮಾತನಾಡಿ, ಚಾಮುಂಡಿಬೆಟ್ಟಕ್ಕೆ ದೇಶ ವಿದೇಶದಿಂದ ರಾಜ್ಯ ವಿವಿಧ ಕಡೆಯಿಂದ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ. ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಎಲ್ಲಾ ಮುಜರಾಯಿ ದೇವಸ್ಥಾಗಳಲ್ಲಿ ಭಕ್ತರು ಪ್ರವೇಶಿಸುವ ಮುನ್ನ ವಸ್ತ್ರಸಂಹಿತೆ ಮಾಹಿತಿ ಫಲಕಗಳನ್ನು ಹಾಕಿ ಜಾಗೃತಿ ಮೂಡಿಸಬೇಕು ಎಂದರು.ದೇವಸ್ಥಾನದ ಪವಿತ್ರ್ಯತೆ ಮತ್ತು ರಕ್ಷಣೆ ಭಾರತೀಯ ಸಂಸ್ಕೃತಿ ಪಾಲನೆ ಆಗುವ ಉದ್ದೇಶದಿಂದ ದೇವಸ್ಥಾನಕ್ಕೆ ಬರುವ ಭಕ್ತರು ತುಂಡು ಬಟ್ಟೆ ಧರಿಸದೆ ಬರುವ ಹಾಗೆ ಭಾರತ ದೇಶದ ಸಂಸ್ಕೃತಿಯ ಪಾಲನೆ ಮಾಡಬೇಕು. ಹೀಗಾಗಿ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೂಡಾ ಮಾಜಿ ಸದಸ್ಯ ನವೀನ್ ಕುಮಾರ್, ಚಾಮುಂಡೇಶ್ವರಿ ಭಕ್ತ ವೃಂದದ ಆನಂದ್, ರವಿಚಂದ್ರ, ಮಹಾನ್ ಶ್ರೇಯಸ್, ಅಜಯ್ ಶಾಸ್ತ್ರಿ, ಮಹೇಶ್, ಬಸವರಾಜ್, ಎಸ್.ಎನ್. ರಾಜೇಶ್ ಮೊದಲಾದವರು ಇದ್ದರು.